ಮಂಗಳವಾರ ರಜೆ

ಮೃಗಾಲಯ ಶಿಕ್ಷಣ


ಝೂ ಕ್ಲಬ್

ಯುವಜನತೆಯನ್ನು ಪ್ರಕೃತಿಗೆ, ವನ್ಯಜೀವಿಗಳಿಗೆ ಹತ್ತಿರವಾಗಿಸುವ ಸಲುವಾಗಿ ಬಿಬಿಬಿಪಿಯು 'ಝೂ ಕ್ಲಬ್' ಅನ್ನು ನಡೆಸುತ್ತಿದೆ. ಇದು 15 ದಿನಗಳ ಕಾರ್ಯಕ್ರಮವಾಗಿದ್ದು ಇದರಲ್ಲಿ 60 ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಈ 15 ದಿನದಲ್ಲಿ ತರಗತಿಯ ಅಭ್ಯಾಸಗಳು ಮತ್ತು ಕ್ಷೇತ್ರ ಭೇಟಿಗಳು ಇರುತ್ತವೆ.

15 ದಿನಗಳಲ್ಲಿ ಪ್ರಾಣಿಗಳ ರಕ್ಷಣೆ, ಪೋಷಣೆ, ನಡವಳಿಕೆಗಳ ಕುರಿತು ತಿಳಿಸಿಕೊಡಲಾಗುತ್ತದೆ. ಇಲ್ಲಿಗೆ ಬರುವ ವಿದ್ಯಾರ್ಥಿಗಳು ಕ್ಷೇತ್ರದ ತಜ್ಞರ ಜೊತೆ ಸಂವಹನ ನಡೆಸಿ ತಮ್ಮ ವೃತ್ತಿಜೀವನವನ್ನು ಆಯ್ಕೆಮಾಡಬಹುದು. ವನ್ಯಜೀವಿ ಕ್ಷೇತ್ರದಲ್ಲೇ ಮುಂದುವರೆಯಲು ಇಚ್ಛಿಸುವವರು ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸುವುದರ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ನಂತರದಲ್ಲಿ ಪಾಲಕರ ಜೊತೆ ಬಂದು ಇದೇ ಅರ್ಜಿಯನ್ನು ಬಿಬಿಬಿಪಿಗೆ ಕೊಡಬೇಕು.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ

1. ಕುಮಾರಿ ಅಮಲಾ ಎಮ್ ಅನಿಲ್ – ಶಿಕ್ಷಣ ಅಧಿಕಾರಿ
ಇ ಮೇಲ್ : bbpwildlifeweek@gmail.com
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತರಬೇತಿ

ಬಿಬಿಬಿಪಿಯು ಪ್ರತಿ ವರ್ಷ ಪಶು ವಿದ್ಯಾರ್ಥಿಗಳಿಗಾಗಿ ತರಬೇತಿಯನ್ನು ನಡೆಸುತ್ತದೆ. ಈ ತರಬೇತಿಯಲ್ಲಿ ಬೆಂಗಳೂರು, ಪಾಂಡಿಚೇರಿ, ಬೀದರ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಾರೆ. ಇದರಲ್ಲಿ ನುರಿತ ಪಶು ವೈದ್ಯರು 1 ವಾರಗಳ ಕಾಲ ತರಬೇತಿ ನೀಡುತ್ತಾರೆ. ಈ ತರಬೇತಿಯಲ್ಲಿ ಮುಖ್ಯವಾಗಿ ಜೀವಿಗಳ ನಿರ್ವಹಣೆಯ ಪರಿಕಲ್ಪನೆ, ನಡವಳಿಕೆಯ ಕುರಿತಾದ ಅಧ್ಯಯನಗಳು, ಟ್ರಾಂಕ್ವಿಲೈಸೇಷನ್ ಸೇರಿದಂತೆ ಇನ್ನೂ ಹಲವು ಚಿಕಿತ್ಸೆ, ಆಹಾರ ಮುಂತಾದ ಅಂಶಗಳನ್ನು ತಿಳಿಸಿಕೊಡುತ್ತಾರೆ.

ವನ್ಯಜೀವಿ ಜಾಗ್ರತಿ ಕಾರ್ಯಕ್ರಮ :

ಬನ್ನೇರುಘಟ್ಟ ಜೈವಿಕ ಉದ್ಯಾನವನ ಬೆಂಗಳೂರು ಶಾಲಾ ಮಕ್ಕಳಿಗಾಗಿ ವನ್ಯಜೀವಿ ಜಾಗ್ರತಿ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಪರಿಸರದ ಕುರಿತು ಮಕ್ಕಳಲ್ಲಿ ಜಾಗ್ರತಿ ಮೂಡಿಸುವುದು ಬಿಬಿಬಿಪಿಯ ಉದ್ದೇಶವಾಗಿದೆ.

ಮತ್ತಷ್ಟು ಓದು

ಐ ಎಫ್ ಎಸ್ ಪರೀಕ್ಷಣೆ ಮತ್ತು ಆರ್ ಎಫ್ ಓ ತರಬೇತುದಾರರು :

ಭಾರತದ ಅರಣ್ಯ ಸೇವೆ ಮತ್ತು ರೇಂಜ್ ಫಾರೆಸ್ಟ್ ಅಧಿಕಾರಿಗಳು ತರಬೇತಿ ಶಿಬಿರಕ್ಕೆ ಭೇಟಿ ನೀಡುತ್ತಾರೆ. ಈ ಅಧಿಕಾರಿಗಳನ್ನು ಉದ್ಯಾನದ ಶಿಕ್ಷಣ ಅಧಿಕಾರಿ ಉದ್ಯಾನ, ಝೂ, ಚಿಟ್ಟೆ ಉದ್ಯಾನಕ್ಕೆ ಸಫಾರಿಯಲ್ಲಿ ಕರೆದುಕೊಂಡು ಹೋಗಿ ಉದ್ಯಾನವನದ ಚಟುವಟಿಕೆ ಮತ್ತು ಪ್ರಾಣಿಗಳ ಕುರಿತು ವಿವರಣೆ ನೀಡುತ್ತಾರೆ.

ಪ್ರೊಜೆಕ್ಟ್ ಸಿದ್ಧತೆ

ವಿದ್ಯಾರ್ಥಿ/ವಿಜ್ಞಾನಿ/ಎನ್ ಜಿ ಓ ಗಳಿಗೆ ಪ್ರಾಣಿ ಮತ್ತು ಉದ್ಯಾನದ ಪ್ರೊಜೆಕ್ಟ್ ರಿಪೋರ್ಟ್ ತಯಾರಿಸಲು ಬೇಕಾದ ಎಲ್ಲ ಸಹಾಯ ಮಾಡಲಾಗುತ್ತದೆ.

ಸಂಕೇತ ಫಲಕಗಳು

ಬಿಬಿಬಿಪಿಯು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ವಿವಿಧ ರೀತಿಯ ಸಂಕೇತ ಫಲಕಗಳನ್ನು ಅಳವಡಿಸಿದೆ. ಈ ಫಲಕಗಳು ಸಂದರ್ಶಕರಲ್ಲಿರುವ ಗೊಂದಲವನ್ನು ನಿವಾರಿಸುತ್ತದೆ. ಪ್ರಾಣಿಗಳ ಆವರಣದಲ್ಲಿ ಎಚ್ಚರಿಕೆಯ ಸಂದೇಶ, ಉದ್ಯಾನದ ಮಾರ್ಗ ನಕ್ಷೆ, ಘೋಷಣೆ ಮತ್ತು ಕೆಲವು ಆಡಳಿತಾತ್ಮಕ ಅಂಶಗಳು ಮುಂತಾದವುಗಳನ್ನು ಸಂಕೇತ ಫಲಕದಲ್ಲಿ ಕಾಣಬಹುದು.

ಮತ್ತಷ್ಟು ಓದು

ವಸ್ತು ಸಂಗ್ರಹಾಲಯ

ಸಂಗ್ರಹಾಲಯವು ಹಲವಾರು ಪ್ರಾಣಿಗಳ ಟ್ರೋಫಿಗಳು, ಛಾಯಾಚಿತ್ರಗಳು, ಅಸ್ಥಿಪಂಜರಗಳು ಮತ್ತು ಪಳೆಯುಳಿಕೆಗಳನ್ನು ಪ್ರದರ್ಶಿಸುತ್ತದೆ. ಉನ್ನತ ಶೈಕ್ಷಣಿಕ ಮೌಲ್ಯವನ್ನು ಹೊಂದಿರುವ ಇವುಗಳು ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುತ್ತವೆ.

ಮಾಧ್ಯಮ

ಉದ್ಯಾನವನದ ಚಟುವಟಿಕೆ, ಅಭಿವೃದ್ಧಿ, ಶಿಕ್ಷಣದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ.