ಮಂಗಳವಾರ ರಜೆ

ವಿಶ್ವ ಆನೆ ದಿನಾಚರಣೆ

ಅಳಿವಿನಂಚಿನಲ್ಲಿರುವ ಆನೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಂರಕ್ಷಿಸಲು ಪ್ರತಿ ವರ್ಷ ಆಗಸ್ಟ್ ೧೨ ರಂದು "ವಿಶ್ವ ಆನೆ ದಿನಾಚರಣೆ" ಅನ್ನು ಆಚರಿಸಲಾಗುತ್ತದೆ. ಅದರಂತೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ವಿಶ್ವ ಆನೆ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ರೀಟಾ ಎಂಬ ಹೆಣ್ಣಾನೆಯನ್ನು ದುಬೈನಲ್ಲಿ ನೆಲೆಸಿರುವ ಅಮಿತ್ ನಾರಂಗ್ ಎಂಬವರು ದತ್ತು ಪಡೆದಿರುತ್ತಾರೆ ಎಂದು ತಿಳಿಸಲು ಸಂತೋಷಪಡುತ್ತೇವೆ.

ವಿಶ್ವ ಆನೆ ದಿನಾಚರಣೆ ಅಂಗವಾಗಿ "ಮೃಗಾಲಯಕ್ಕೆ ಶ್ರಮದಾನ" ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಇದರಲ್ಲಿ ನಾಗರಿಕರು ಮತ್ತು ವನ್ಯಜೀವಿ ಉತ್ಸಾಹಿಗಳು ಮೇವು ಕೊಯ್ಲಿನ ರೂಪದಲ್ಲಿ ತಮ್ಮ ಸೇವೆಯನ್ನು ಒದಗಿಸುವುದರ ಮೂಲಕ ಆಚರಣೆಯನ್ನು ಪ್ರಾರಂಭಿಸಲಾಯಿತು. ಕಟಾವು ಮಾಡಿದ ಮೇವನ್ನು ಮಾವುತರು ಆನೆಗಳಿಗೆ ನೀಡಿದರು.

ಇದಲ್ಲದೆ, ಆನೆಗಳಿಗೆ ನೈಸರ್ಗಿಕ ವರ್ತನೆಯನ್ನು ಉತ್ತೇಜಿಸುವ ಸಲುವಾಗಿ ಹಸಿರು ರೆಂಬೆ ಕೊಂಬೆಗಳೊದಿಗೆ ಹಣ್ಣು-ಹಂಪಲು, ತರಕಾರಿಗಳ ಪುಷ್ಟೀಕರಣವನ್ನು ನೀಡಲಾಯಿತು. ಈ ಆಹಾರ ಸಾಮಗ್ರಿಗಳನ್ನು ಕೊಳವೆಯಲ್ಲಿ ಜೋಡಿಸಿ ಆನೆಗಳ ಮುಂದೆ ಇಡಲಾಗಿ, ಅವು ಸ್ವಾಭಾವಿಕವಾಗಿ ಕಾಡಿನಲ್ಲಿ ತಮ್ಮ ಸೊಂಡಿಲಿನ ಮೂಲಕ ಪಡೆಯುವಂತೆ ಇಲ್ಲಿಯೂ ಸಹ ನೈಸರ್ಗಿಕ ರೀತಿಯಲ್ಲಿ ಪಡೆದುಕೊಂಡವು.

ಎಸ್‌ಒಎಸ್ ಚಿಲ್ಡನ್ಸ್ ವಿಲೇಜನ ೫೫ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಹಾಗೂ ಕುತೂಹಲಕಾರಿಯಾಗಿ ಭಾಗವಹಿಸಿದ್ದು, ಇವರಿಗೆ ಬನ್ನೇರುಘಟ್ಟದಲ್ಲಿ ಆನೆಗಳ ನಿರ್ವಹಣೆ, ಕಾಡಿನಲ್ಲಿ ಎದುರಿಸುತ್ತಿರುವ ತೊಂದರೆಗಳು ಮತ್ತು ಅಳಿವಿನಂಚಿನಲ್ಲಿರುವ ಆನೆಗಳನ್ನು ಸಂರಕ್ಷಿಸುವ ಬಗ್ಗೆ ಅರಿವು ಮೂಡಿಸಲಾಯಿತು. ನಂತರ ವಿದ್ಯಾರ್ಥಿಗಳು ಹಾಗೂ ಸಂದರ್ಶಕರು ವನ್ಯಜೀವಿ ಪ್ರತಿಜ್ಞೆಯನ್ನು ಸ್ವೀಕರಿಸಿದರು. ಮತ್ತು ಆನೆ ಮಾವುತ ಕುಂಟುAಬದವರಿAದ ಮಾಡಲ್ಪಟ್ಟ "ಎಲಿಫೆಂಟ್ ಫ್ರೆಂಡ್‌ಶಿಪ್ ಬ್ಯಾಂಡ್" ನ್ನು ಸಂದರ್ಶಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಟ್ಟಿದರು.

ಹಿರಿಯ ಜೇನು ಕುರುಬ ಮಾವುತರಾದ ಶ್ರೀ ಮೋಟಣ್ಣ ಇವರು ಆನೆ ಮಾವುತ ಕುಂಟುಬದವರಿದ ಮಾಡಲ್ಪಟ್ಟ ವಿಶಿಷ್ಟ ರೀತಿಯ ಆನೆ ಪದಕದ ಹಾರವನ್ನು ಇತರೆ ಮಾವುತ, ಕಾವಾಡಿ ಮತ್ತು ಅವರ ಮಕ್ಕಳಿಗೆ ನೀಡಿ, ಆನೆಗಳನ್ನು ನೋಡಿಕೊಳ್ಳುವ ಭರವಸೆಯ ಜೊತೆಗೆ ಕೌಶಲ್ಯವನ್ನು ಅವರಿಗೆ ತಿಳಿಸಿ ಮಾದರಿಯಾದರು.