ಬಿಬಿಬಿಪಿಯ ಸಸ್ಯವರ್ಗವನ್ನು ಎರಡು ಪ್ರಕಾರವಾಗಿ ವಿಂಗಡಿಸಬಹುದು.
ಈ ಜಾತಿಯ ಸಸ್ಯವರ್ಗವು ಪ್ರತಿಶತ 10ರಷ್ಟು ಕಡಿಮೆ ಬೆಳವಣಿಗೆ ಹೊಂದಿ ತೆರೆದ ಮೇಲಾವರಣವನ್ನು ಹೊಂದಿರುತ್ತವೆ. ಅಕ್ಕ ಪಕ್ಕದ ಹಳ್ಳಿಯವರು ಜಾನುವಾರುಗಳನ್ನು ಮೇಯಿಸುವುದು ಮತ್ತು ಮರಗಳ ಅಕ್ರಮ ಬಳಕೆಯಿಂದಾಗಿ ಇವುಗಳ ಬೆಳವಣಿಗೆ ಕುಂಠಿತವಾಗಿದೆ.
ದಿಣ್ಣಿಗ (Anogeissus latifolia), ಹುರಗಲು (Chloroxylon sweitenia),ಕರಿಜಾಲಿ (Acacia leucophloea), ಕಗ್ಗಲಿ ಮರ (Acacia catechu), ಲಿಂಗದಾರೆ ಗಿಡ (Stereospermum chelonoides), ಗಂಧದ ಮರ (Santalum album), ಅರಗಿನ ಮರ (Shorea talura), ಬೇವಿನ ಮರ (Azadirachta indica), ತಾರೆ ಮರ (Terminaliaspp), ಕಲ್ಕತ್ತಾ ಬಿದಿರು (Dendrocalamus strictus), ಚೀನಾ ಸೇಬು (Zizyphusspp) ಮುಂತಾದ ಪ್ರಮುಖ ಮರಗಳಿವೆ.
ಚದರಂಗಿ (Lantana camara), ಈಚಲು (Phoenix acaulis), ತಗಚೆ (Cassia tora),ತಂಗಡಿ, ಆವರಿಕೆ (Cassia auriculata), ಕಾರೆಕಾಯಿ ಗಿಡ (Randia floribunda), ಬಾಡು ಬಕ್ಕ (Pterolobium indicum), ಮುಳ್ಳುಕತ್ತರಿ (Capparis spp), ಗೌರಿ ಹೂವು (Gloriosa superba) ಮುಂತಾದ ಗಿಡಗಂಟಿಗಳಿವೆ. ಇವುಗಳ ಹೊರತಾಗಿ ಇಲ್ಲಿ ಕಾಡು ಸೀಗೆಯ ಬಳ್ಳಿಗಳು ಹೆಚ್ಚಾಗಿ ಕಾಣುತ್ತವೆ. ಇಂತಹ ಅರಣ್ಯದಲ್ಲಿ ಹುಲ್ಲು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತದೆ. ಕುರುಚಲು ಗಿಡಗಳು ಮಳೆಗಾಲದ ಸಮಯದಲ್ಲಿ ಸಸ್ಯಾಹಾರಿ ಪ್ರಾಣಿಗಳಿಗೆ ಸಾಕಷ್ಟು ಮೇವನ್ನು ಒದಗಿಸುತ್ತವೆ. ಈ ಗಿಡಗಳು ಮೃಗಾಲಯದ ಎಲ್ಲ ಕಡೆ ಕಾಣಸಿಗುತ್ತವೆ.
ದಕ್ಷಿಣ ಉಷ್ಣವಲಯದ ಎಲೆ ಉದುರಿಸುವ ಕಾಡು ಈ ತರಹದ ಅರಣ್ಯದಲ್ಲಿ ಮರಗಳು ಪ್ರತಿಶತ 10ರಿಂದ 40 ರಷ್ಟು ತೆರೆದ ಮೇಲಾವರಣವನ್ನು ಹೊಂದಿವೆ. ಈ ಮರಗಳು ಬೇಸಿಗೆಯಲ್ಲಿ ಎಲೆಗಳನ್ನು ಉದುರಿಸುತ್ತವೆ. ತಾರೆ ಮರ (Terminalia spp), ಬಂಗೆ, ಕೆಂಪು ಹೊನ್ನೆ (Pterocarpus marsupium), ಬೀಟೆ (Dalbergia latifolia), ಬಿಳಿ ಬೀಟೆ (Dolbergia paniculata), ಶಿವನಿ ಮರ (Gmelina arborea), ಮರುವಾಚಲು ಮರ (Lagestroemia parviflora), ಗುಗ್ಗುಳ ಮರ (Boswellia serrata), ಕಲ್ಕತ್ತ ಬಿದಿರು (Dendrocalamus strictus).ಮುಳ್ಳಕರೆ (Vangueria spinosa), ಮದನ ಫಲ ( Randia dumentorum), ಅಜ ಮರ(Wrightia tinctoria), ಅಂಜೂರ ( Zizyphus jujube), ಗಂಧದ ಮರ (Santalum album), ಬೆಲಗದ ಮರ (Kydia calycina), ಬಲಾಯಿ ಮರ (Diospyros melanoxylon), ಅರಗಿನ ಮರ (Shorea talura) ಮತ್ತು ಕಕ್ಕೆ ಮರ (Casia fistula) ಮುಂತಾದ ಮರಗಳಿವೆ.
ಮರಗಳ ಕೆಳಗೆ ಅಲ್ಲಲ್ಲಿ ಹುಲ್ಲು ಮತ್ತು ಈಚಲು (Phoenix humilis), ಪೆಡಮುರಿ (Helicteris isora), ಗೌರಿ ಹೂವು (Gloriosa superba)ಗಳು ಬೆಳೆದಿವೆ. ಬಿಬಿಪಿಯ ಕಣಿವೆ ಪ್ರದೇಶಗಳಲ್ಲೆಲ್ಲ ಇಂತಹ ಸಸ್ಯಗಳು ಹೇರಳವಾಗಿವೆ.
ಇಂತಹ ಅರಣ್ಯಗಳು ಪ್ರತಿಶತ 35 ಅಥವಾ ಅದಕ್ಕಿಂತ ಹೆಚ್ಚಿನ ಮೇಲಾವರಣವನ್ನು ಹೊಂದಿರುತ್ತವೆ. ರಾಗಿಹಳ್ಳಿ ರಕ್ಷಿತ ಅರಣ್ಯದ ಕಣಿವೆ ಪ್ರದೇಶದಲ್ಲಿ ತೇಗ (Tectonagrandis), ತಾರೆ ಮರ (Terminalia spp), ಹೊನ್ನೆ ಮರ (Pterocarpus marsupium), ಬೀಟೆ (Dalbergia latifolia), ಬಿಳಿ ನಂದಿ (Lagestroemia lanceolata), ಕೆಂಪು ಹೊನ್ನೆ (Pterocarpus marsupium), ಬೂರುಗ ಮರ (Bombax malabaricum), ಎತ್ತೆಗ, ಅರಿಸಿನ ತೇಗ (Adina cordifolia), ಕರಿ ಬಸರಿ ಮರ (Ficus infectoria) ಮತ್ತು ಅರಳಿಮರದ ಜಾತಿಗೆ ಸೇರಿದ ವೃಕ್ಷಗಳಿವೆ. ನೆಲ್ಲಿ (Emblica officinalis), ಕುಂಕುಮದ ಮರ (Mallotus philippinensis), ಬೆಲಗದ ಮರ (Kydia calycina), ಮದನ ಫಲ (Randia dumetorium) ಮುಂತಾದ ದ್ವಿತೀಯ ಮೇಲ್ಪದರದ ಮರಗಳಿವೆ. ಹೆಗ್ಗುಳ್ಳ (Solanum ferox), ಕಿರಿ ಗುಳ್ಳ (Solanum indicum), ಎಡಮುರಿ (Helicterisisora), ಹಾಲುಬಳ್ಳಿ (Hemidesmus indicus), ಚದರಂಗಿ (Lantana camara), ನಂತಹ ಹಲವು ಗಿಡಗಂಟಿಗಳಿವೆ.
ಸಫಾರಿ ಮತ್ತು ಜೈವಿಕ ಸಂರಕ್ಷಣಾ ಕೇಂದ್ರದಲ್ಲಿ ಕಾಣಸಿಗುವ ಪ್ರಾಣಿಗಳ ಹೊರತಾಗಿ ಇನ್ನೂ ಹಲವು ಪ್ರಾಣಿಗಳನ್ನು ನಾವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಕಾಣಬಹುದು.
ಆನೆ, ಚಿರತೆ, ಕಾಡೆಮ್ಮೆ, ಚಿಟಲ್, ಸಾಂಬಾರ್, ಸ್ಲಾತ್ ಕರಡಿ, ಬಾರ್ಕಿಂಗ್ ಜಿಂಕೆ, ಕಾಡು ಹಂದಿ, ಕಾಡು ನಾಯಿ, ನರಿಗಳು, ಮೌಸ್ ಜಿಂಕೆ, ಬಾನೆಟ್ ಮೆಕಾಕ್, ಸ್ಟ್ರಿಪ್ಡ್ ಹೈನಾ (ಪಟ್ಟೆಯುಳ್ಳ ಕತ್ತೆ ಕಿರುಬ), ಪೊರ್ಕ್ಯುಪಿನ್ (ಮುಳ್ಳುಹಂದಿ) ಇತ್ಯಾದಿ ಸಸ್ತನಿಗಳನ್ನು ಕಾಣಬಹುದು.
ಹೆಣ್ಣು ಅಥವಾ ಗಂಡು ನವಿಲು (peafowl), ಕಾಡು ಕೋಳಿ (grey jungle foul),ಟಿಟ್ಟಿಭ ಪಕ್ಷಿ (patridges), ಕ್ವಿಲ್ಲುಗಳು, ಮರಗುಟಿಗ ಹಕ್ಕಿ, (wood peckers) ಕೊಕ್ಕರೆಗಳು (storks), ಫ್ಲವರ್ - ಪೆಕರ್ಸ್, ಹಾಡು ಹಕ್ಕಿಗಳು (thrushes),ಹದ್ದುಗಳು (eagles), ಕೋಗಿಲೆಗಳು (cuckoos), ಗಿಣಿಗಳು (parakeets), ಹೊನ್ನಕ್ಕಿಗಳು (orioles), ಮಿನಿವೆಟ್ಸ್, ಕಾಜಾಣಗಳು (drongos), ಪಾರಿವಾಳಗಳು(wagtails), ಬಾಲದಂಡೆ ಹಕ್ಕಿ ಅಥವಾ ನೊಣಹಿಡುಕ (fly catcher), ಸಣ್ಣ ಸೂರಕ್ಕಿ(sunbird), ಹೂ ಕುಟಿಗ (flower peckers) ಮುಂತಾದವು ಪಕ್ಷಿ ಸಂಕುಲದ ಭಾಗವಾಗಿವೆ.
ದೊಡ್ಡ ಜಾತಿಯ ಹಲ್ಲಿ, ಮೊಸಳೆ, ಆಮೆ, ಹೆಬ್ಬಾವು, ಇಲಿ ಹಾವು, ಕಟ್ಟಿಗೆ ಹಾವು (krait), ಕೊಳಕ ಮಂಡಲ ಹಾವು (viper), ನಾಗರಹಾವು ಮುಂತಾದವು ನೀರಿನ ಕುಳಿ ಅಥವಾ ಖಾಲಿ ಪ್ರದೇಶಗಳಲ್ಲಿ ವಾಸಿಸುವ ಸರೀಸೃಪಗಳಾಗಿವೆ.
ಕಪ್ಪೆ, ನೆಲಗಪ್ಪೆಗಳು (toads), ಬೆಂಕಿ ಮೊಸಳೆಗಳು (salamander) ಮುಂತಾದವು ಬಿಬಿಬಿಪಿಯಲ್ಲಿರುವ ಉಭಯಚರಗಳಾಗಿವೆ.
ವಿವಿಧ ರೀತಿಯ ಚಿಟ್ಟೆಗಳು, ಜೇನುನೊಣಗಳು, ಇರುವೆಗಳನ್ನು ಬಿಬಿಬಿಪಿಯಲ್ಲಿ ಕಾಣಬಹುದು.