ಇ ಟಿಕೆಟ್ ಖರೀದಿಗೆ ಸಂಬಂಧಿತ ನಿಯಮಗಳು ಮತ್ತು ಷರತ್ತುಗಳು
ಸಹಾಯಕರು ಮತ್ತು ಸಂಯೋಜಕರನ್ನೊಳಗೊಂಡ ಜಾಲತಾಣ ಮಾಲೀಕರು ("ವೆಬ್ ಸೈಟ್" ಅಥವಾ "ವೆಬ್ ಸೈಟ್ ಓನರ್" ಅಥವಾ "ನಾವು" ಅಥವಾ "ನಮಗೆ" ಅಥವಾ "ನಮ್ಮ") ಜಾಲತಾಣದಲ್ಲಿರುವ
(www.bannerughattabiopark.org) ಅಥವಾ ಯಾವುದೇ ಪುಟದಲ್ಲಿರುವ ಮಾಹಿತಿಯನ್ನು ಪ್ರವಾಸಿ (ನೀವು ಅಥವಾ ನಿಮ್ಮ ಎಂದು ಉಲ್ಲೇಖಿಸಲಾಗಿದೆ)ಗರಿಗೆ ಒದಗಿಸುವುದು ಕೂಡ ನಿಯಮ ಮತ್ತು ಷರತ್ತುಗಳಿಗೆ
ಒಳಪಟ್ಟಿದೆ. ಜಾಲತಾಣದ ನಿಯಮ, ಷರತ್ತುಗಳು ಮತ್ತು ಗೌಪ್ಯತಾ ನೀತಿ, ಪ್ರಕಟಣೆಗಳು ನಿರ್ದಿಷ್ಟ ವಿಭಾಗ ಅಥವಾ ವೆಬ್ ಸೈಟ್ ಮಾಡ್ಯೂಲ್ ಗೆ ಅನ್ವಯವಾಗಬಹುದು.
ನಿಯಮ ಮತ್ತು ಷರತ್ತುಗಳು
ನಮ್ಮ www.bannerughattabiopark.org ಗೆ ಸ್ವಾಗತ. ನೀವು ಈ ಜಾಲತಾಣವನ್ನು ಶೋಧ ಮಾಡುವುದು ಮತ್ತು ಬಳಸುವುದನ್ನು ಮುಂದುವರೆಸಿದರೆ, ನೀವು ಈ ವೆಬ್ ಸೈಟ್ ನ ಬಳಕೆಯ
ನಿಯಮ ಮತ್ತು ಷರತ್ತುಗಳಿಗೆ ಬದ್ಧರಾಗಿರಲು ಒಪ್ಪಿಗೆ ನೀಡಿದ್ದೀರಿ ಎಂದರ್ಥ. ಇದರೊಂದಿಗೆ ನಮ್ಮ ಗೌಪ್ಯತಾ ನೀತಿಯ ಆಡಳಿತ www.bannerughattabiopark.org ಹಾಗೂ ನಿಮ್ಮೊಂದಿಗೆ ಬೆಸೆದುಕೊಳ್ಳುತ್ತದೆ.
'ಬಿಬಿಬಿಪಿ'ಯಲ್ಲಿ ಅಥವಾ 'ನಮಗೆ' ಅಥವಾ 'ನಾವು' ಎನ್ನುವ ಶಬ್ದವು www.bannerughattabiopark.org ನ ಓನರ್ ಅನ್ನು ಸೂಚಿಸುತ್ತದೆ. ಇದರ ನೊಂದಣಿ ಕಚೇರಿಯು ಕಾರ್ಯನಿರ್ವಾಹಕ
ನಿರ್ದೇಶಕರು, ಬನ್ನೇರುಘಟ್ಟ ಜೈವಿಕ ಉದ್ಯಾನವನ ಬೆಂಗಳೂರು ಬನ್ನೇರುಘಟ್ಟ, ಬೆಂಗಳೂರು - 560083, ಕರ್ನಾಟಕ, ಭಾರತ ಆಗಿದೆ. ಕಂಪನಿಯ ನೊಂದಣಿ ಸಂಖ್ಯೆ ಹಾಗೂ ನೊಂದಣಿ ಸ್ಥಳ 168/79-80, ಬೆಂಗಳೂರು.
'ನೀವು' ಎಂಬ ಶಬ್ದವು ಜಾಲತಾಣ ಬಳಕೆದಾರರ ಅಥವಾ ವೀಕ್ಷಕರನ್ನು ಉಲ್ಲೇಖಿಸುತ್ತದೆ.
ಜಾಲತಾಣ ಕೆಲವು ಬಳಕೆಯ ನಿಯಮಗಳಿಗೆ ಒಳಪಟ್ಟಿದೆ:
- ಈ ಜಾಲತಾಣದ ಪುಟಗಳಲ್ಲಿನ ವಿಷಯಗಳು ನಿಮ್ಮ ಸಾಮಾನ್ಯ ಜ್ಞಾನಕ್ಕೆ ಮಾತ್ರ ಸೀಮಿತವಾಗಿದೆ. ಯಾವುದೇ ಸೂಚನೆ ಇಲ್ಲದೆ ಇದರಲ್ಲಿನ ವಿಷಯಗಳು ಬದಲಾಗಬಹುದು.
- ಈ ಜಾಲತಾಣದಲ್ಲಿ ನೀಡಿರುವ ಮಾಹಿತಿ, ನಿಖರತೆ, ಸಮಯ, ಕಾರ್ಯಕ್ಷಮತೆ, ಪರಿಪೂರ್ಣತೆ, ಉತ್ಪನ್ನ, ಕೊಡುಗೆ ಅಥವಾ ಸೂಕ್ತತೆಯ ಕುರಿತು ಜಾಲತಾಣವಾಗಲೀ ಅಥವಾ ಯಾವುದೋ ಮೂರನೇ ವ್ಯಕ್ತಿಯಾಗಲೀ ಭರವಸೆ
ಅಥವಾ ಖಾತ್ರಿ ನೀಡುವುದಿಲ್ಲ. ನೀವು ಮಾಹಿತಿ ಅಥವಾ ಸಾಮಗ್ರಿಗಳಲ್ಲಿ ದೋಷವಿದೆ ಎಂಬುದನ್ನು ಅಂಗೀಕರಿಸಿದರೆ ಅಂತಹ ಕಾನೂನು ಬಾಹಿರ ವಿಷಯಗಳಿಗೆ ನಾವು ಜವಾಬ್ದಾರರಲ್ಲ.
- ಜಾಲತಾಣದಲ್ಲಿನ ಯಾವುದೇ ವಸ್ತು ಅಥವಾ ವಿಷಯವನ್ನು ನೀವು ಬಳಕೆ ಮಾಡಿದಲ್ಲಿ ಅದಕ್ಕೆ ಜಾಲತಾಣ ಜವಾಬ್ದಾರಿಯಲ್ಲ. ಜಾಲತಾಣದ ಮೂಲಕ ಲಭ್ಯವಿರುವ ಉತ್ಪನ್ನ, ಸೇವೆ ಅಥವಾ ಮಾಹಿತಿಯು ನಿಮ್ಮ ಅವಶ್ಯಕತೆಗಳನ್ನು
ಪೂರೈಸುತ್ತದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ನಿಮ್ಮದೇ ಆಗಿದೆ.
- ಜಾಲತಾಣ ಮಾಲೀಕತ್ವದ ಅಥವಾ ಪರವಾನಗಿ ಹೊಂದಿದ ವಸ್ತುಗಳನ್ನೇ ಒಳಗೊಂಡಿರುತ್ತದೆ. ಇಂತಹ ವಸ್ತುಗಳು ವಿನ್ಯಾಸ, ನೋಟ, ನಕ್ಷೆ ಮುಂತಾದವುಗಳನ್ನು ಒಳಗೊಂಡಿರುತ್ತದೆಯೇ ವಿನಃ ಅದಕ್ಕೇ ಸೀಮಿತವಾಗಿರುವುದಿಲ್ಲ.
ಷರತ್ತಿಗೆ, ಕೃತಿಸ್ವಾಮ್ಯ ಸೂಚನೆಗೆ ಅನುಗುಣವಾಗಿ ಮರುಉತ್ಪಾದನೆಯನ್ನು ನಿಷೇಧಿಸಲಾಗಿದೆ.
- ಜಾಲ ತಾಣದ ನಿರ್ವಾಹಕರು ಎಲ್ಲ ಟ್ರೇಡ್ ಮಾರ್ಕ್ ಗಳನ್ನು ಮರುಉತ್ಪಾದಿಸಿದ್ದು, ಇವುಗಳನ್ನು ಆಸ್ತಿಯೆಂದಾಗಲೀ, ಪರವಾನಗಿ ಎಂದಾಗಲೀ ಪರಿಗಣಿಸಿಲ್ಲ.
- ಈ ಜಾಲತಾಣದ ಅನಧಿಕೃತ ಬಳಕೆಯಿಂದ ಹಾನಿ ತುಂಬಬೇಕಾಗಬಹುದು ಮತ್ತು/ಅಥವಾ ಇದೊಂದು ಅಪರಾಧವಾಗಬಹುದು.
- ಕಾಲಕಾಲಕ್ಕೆ ಈ ಜಾಲತಾಣ ಬೇರೆ ಜಾಲತಾಣಗಳ ಲಿಂಕ್ ಗಳನ್ನು ಹೊಂದಿರುತ್ತದೆ. ಅಂತಹ ಲಿಂಕ್ ಗಳು ನಿಮ್ಮ ಅನುಕೂಲಕ್ಕಾಗಿ ಮತ್ತು ನಿಮಗೆ ಹೆಚ್ಚಿನ ಮಾಹಿತಿ ನೀಡಲು ಅನುಕೂಲವಾಗಬಹುದು. ಹೀಗೆ ಲಿಂಕ್ ಮಾಡಿದ
ಜಾಲತಾಣದ ಕುರಿತು ಅಥವಾ ಅದರಲ್ಲಿರುವ ವಿಷಯಗಳಿಗೆ ನಮ್ಮ ಜಾಲತಾಣ ಯಾವುದೇ ರೀತಿಯಲ್ಲೂ ಜವಾಬ್ದಾರಿಯಲ್ಲ.
- ಬಿಬಿಬಿಪಿಯ ಲಿಖಿತ ಪರವಾನಗಿ ಇಲ್ಲದೇ ನೀವು ಬೇರೆ ಜಾಲತಾಣಕ್ಕೆ ಅಥವಾ ಡಾಕ್ಯುಮೆಂಟ್ ಗಳಿಗೆ ಬಿಬಿಬಿಪಿಯ ಜಾಲತಾಣವನ್ನು ಲಿಂಕ್ ಮಾಡಬಾರದು.
- ಜಾಲತಾಣ ಬಳಕೆ ಅಥವಾ ಬಳಕೆಯಿಂದ ಉಂಟಾಗುವ ಯಾವುದೇ ವಿವಾದವು ಭಾರತ ಕಾನೂನು ಅಥವಾ ನಿಯಂತ್ರಣ ಪ್ರಾಧಿಕಾರಕ್ಕೆ ಒಳಪಟ್ಟಿರುತ್ತದೆ.
"ನಾವು ಸ್ವಾಧೀನಕ್ಕೊಳಪಟ್ಟ ಬ್ಯಾಂಕಿನ ಪ್ರತ್ಯಕ್ಷ ಅಥವಾ ಪರೋಕ್ಷ ವಹಿವಾಟುಗಳಿಂದಾಗುವ ನಷ್ಟ ಅಥವಾ ಹಾನಿಗೆ ವ್ಯಾಪಾರಿಗಳಾದ ನಾವು ಯಾವುದೇ ರೀತಿಯ ಜವಾಬ್ದಾರರಲ್ಲ".