February 27, 2023 to March 01, 2023
Bannerghatta Biological Park (BBP), Bengaluru organized a 3 day "Regional Capacity Enhancement Workshop for Zookeepers of Southern India" from February 27, 2023 to March 01, 2023 in association with Central Zoo Authority (CZA), New Delhi. 29 keepers from 20 zoos across the Southern Indian states of Karnataka, Kerala, Tamil Nadu, Telangana and Andhra Pradesh participated in the workshop.
Read MoreFebruary 9th 2023 to 11th February 2023
As part of India’s Presidency of G-20, 1st meeting of the Environmentworking group was scheduled in Bengaluru from 9th to 11th February, 2023. The theme of the Environment group was “Arresting Land Degradation, Accelerating Ecosystem Restoration and Enriching Biodiversity”. Bannerghatta Biological Park (BBP) was selected as part of their site visit where a group of 80 delegates from G-20 member countries visited the Safari and Butterfly Park on 9th February 2023.
Read More4 ಸೆಪ್ಟೆಂಬರ್ 2021
ಪ್ರತಿವರ್ಷ ಸೆಪ್ಟೆಂಬರ್ ಮೊದಲ ಶನಿವಾರ ಆಚರಿಸಲಾಗುವ "ಅಂತರಾಷ್ಟ್ರೀಯ ರಣಹದ್ದು ಜಾಗೃತಿ ದಿನಾಚರಣೆಯ" ಸಂದರ್ಭದಲ್ಲಿ, ಬನ್ನೇರುಘಟ್ಟ ಜೈವಿಕ ಉದ್ಯಾನವನವು ಕರ್ನಾಟಕದಲ್ಲಿ ಕಂಡುಬರುವ ರಣಹದ್ದುಗಳು, ಅವುಗಳ ಪ್ರಾಮುಖ್ಯತೆ, ರಣಹದ್ದು ಸಂಖ್ಯೆಗಳಿಗಿರುವ ಅಪಾಯಗಳು ಮತ್ತು ಅವುಗಳನ್ನು ಸಂರಕ್ಷಿಸುವ ಮಾರ್ಗಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಮತ್ತಷ್ಟು ಓದಿ15 ಆಗಸ್ಟ್ 2021
"ಆಜಾದಿ ಕಾ ಅಮೃತ್ ಮಹೋತ್ಸವದ" ಸಂದರ್ಭದಲ್ಲಿ, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ, ಕೋವಿಡ್ ಸಮಯದಲ್ಲಿ ಮೂಲಸ್ಥಾನದ ಹೊರಗಿನ ವನ್ಯಜೀವಿಗಳ ಸಂರಕ್ಷಣೆಗಾಗಿ ಕೆಲಸ ಮಾಡಿದ ಹದಿಮೂರು ಸಿಬ್ಬಂದಿಗಳಿಗೆ ಬಹುಮಾನಗಳನ್ನು ನೀಡಲಾಯಿತು.
ಉದ್ಯಾನವನದ ನೈರ್ಮಲ್ಯದಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿಗಳು, ಕೋವಿಡ್‌ನಿಂದ ಚೇತರಿಸಿಕೊಂಡವರು, ವನ್ಯಪ್ರಾಣಿಗಳ ರಕ್ಷಣಾ ಕಾರ್ಯಾಚರಣೆಗಳು ಮತ್ತು ಪ್ರಾಣಿಗಳ ನಿರ್ವಹಣೆಯಲ್ಲಿ ತೊಡಗಿರುವ ಸಿಬ್ಬಂದಿಗಳಿಗೆ ಪುರಸ್ಕರಿಸಲಾಯಿತು. ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿದ ಏಳು ಸಿಬ್ಬಂದಿಗಳ ಪ್ರತಿಭಾನ್ವಿತ ಮಕ್ಕಳಿಗೆ ಶ್ರೀ ಆರ್. ಎಂ. ಎನ್. ಸಹಾಯ್ (ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು) ಬಹುಮಾನ ವಿತರಿಸಿದರು.
ಮತ್ತಷ್ಟು ಓದಿ12 ಆಗಸ್ಟ್ 2021
ಅಳಿವಿನಂಚಿನಲ್ಲಿರುವ ಆನೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಂರಕ್ಷಿಸಲು ಪ್ರತಿ ವರ್ಷ ಆಗಸ್ಟ್ ೧೨ ರಂದು "ವಿಶ್ವ ಆನೆ ದಿನಾಚರಣೆ" ಅನ್ನು ಆಚರಿಸಲಾಗುತ್ತದೆ. ಅದರಂತೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ವಿಶ್ವ ಆನೆ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ರೀಟಾ ಎಂಬ ಹೆಣ್ಣಾನೆಯನ್ನು ದುಬೈನಲ್ಲಿ ನೆಲೆಸಿರುವ ಅಮಿತ್ ನಾರಂಗ್ ಎಂಬವರು ದತ್ತು ಪಡೆದಿರುತ್ತಾರೆ ಎಂದು ತಿಳಿಸಲು ಸಂತೋಷಪಡುತ್ತೇವೆ.
ವಿಶ್ವ ಆನೆ ದಿನಾಚರಣೆ ಅಂಗವಾಗಿ "ಮೃಗಾಲಯಕ್ಕೆ ಶ್ರಮದಾನ" ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಇದರಲ್ಲಿ ನಾಗರಿಕರು ಮತ್ತು ವನ್ಯಜೀವಿ ಉತ್ಸಾಹಿಗಳು ಮೇವು ಕೊಯ್ಲಿನ ರೂಪದಲ್ಲಿ ತಮ್ಮ ಸೇವೆಯನ್ನು ಒದಗಿಸುವುದರ ಮೂಲಕ ಆಚರಣೆಯನ್ನು ಪ್ರಾರಂಭಿಸಲಾಯಿತು. ಕಟಾವು ಮಾಡಿದ ಮೇವನ್ನು ಮಾವುತರು ಆನೆಗಳಿಗೆ ನೀಡಿದರು.
ಮತ್ತಷ್ಟು ಓದಿ