ಮಂಗಳವಾರ ರಜೆ

ಗೌಪ್ಯತಾ ನೀತಿ

ಗೌಪ್ಯತಾ ನೀತಿಯು ವೆಬ್ ಸೈಟ್ ಬಳಕೆದಾರರ ಖಾಸಗೀತನವನ್ನು ಹೇಗೆ ಗೌರವಿಸಬೇಕೆಂದು ತಿಳಿಸುತ್ತದೆ. ಇದು ನೀವು ಹೇಗೆ ಮಾಹಿತಿಯನ್ನು ಕಲೆಹಾಕುತ್ತೀರಿ, ಹೇಗೆ ಬಳಸುತ್ತೀರಿ ಮತ್ತು ಹೇಗೆ ಅದನ್ನು ಗೌಪ್ಯವಾಗಿಡುತ್ತೀರಿ ಎಂಬುದನ್ನು ವಿವರಿಸುತ್ತದೆ.

ಗೌಪ್ಯತಾ ನೀತಿಯು ಕಾನೂನುಬದ್ಧ ದಾಖಲೆಯಾಗಿದ್ದು ಬಳಕೆದಾರರ ದತ್ತಾಂಶವನ್ನು ಒಟ್ಟುಗೂಡಿಸುತ್ತದೆ, ಬಳಸುತ್ತದೆ, ನಿರ್ವಹಿಸುತ್ತದೆ ಮತ್ತು ಬಹಿರಂಗಪಡಿಸುತ್ತದೆ. ಗೌಪ್ಯತಾ ನೀತಿಯು ನಿಖರವಾದ ವಿಷಯಗಳು ಹಾಗೂ ಕಾನೂನನ್ನು ಅವಲಂಬಿಸಿದ್ದು, ಬಹು ದೇಶದ ನ್ಯಾಯವ್ಯಾಪ್ತಿಗೆ ಒಳಪಡುತ್ತದೆ. ಗೌಪ್ಯತಾ ನೀತಿಗಳಿಗೆ ಯಾವುದೇ ನಿರ್ದಿಷ್ಟ ಮಾರ್ಗದರ್ಶನ ಇಲ್ಲವಾದರೂ, ಹಲವಾರು ಸಂಘ-ಸಂಸ್ಥೆಗಳು ಉದಾಹರಣೆ ಸ್ವರೂಪ ನೀಡುತ್ತವೆ.

ಜಾಲತಾಣದ ಗೌಪ್ಯತೆ

ಈ ಜಾಲತಾಣವನ್ನು ಬಳಸುವಾಗ ನೀವು ನೀಡಿದ ಯಾವುದೇ ಮಾಹಿತಿಯನ್ನು ಜೈವಿಕ ಉದ್ಯಾನವು ಹೇಗೆ ಬಳಸುತ್ತದೆ ಮತ್ತು ರಕ್ಷಿಸುತ್ತದೆ ಎಂಬುದನ್ನು ಗೌಪ್ಯತಾ ನೀತಿಯು ನಿರ್ಧರಿಸುತ್ತದೆ. ನೀವು ನೀಡಿದ ಮಾಹಿತಿಗಳು ಗೌಪ್ಯವಾಗಿರುತ್ತವೆ ಎಂದು ಬಿಬಿಬಿಪಿ ಖಚಿತವಾಗಿ ಹೇಳುತ್ತದೆ.ಜಾಲತಾಣವನ್ನು ಶೋಧಿಸುವಾಗ ನಿಮ್ಮನ್ನು ಗುರುತಿಸಲ್ಪಡುವಂತಹ ಕೆಲವು ಮಾಹಿತಿಗಳನ್ನು ಕೇಳಲಾಗುತ್ತದೆ. ಇಂತಹ ಮಾಹಿತಿಗಳನ್ನು ಗೌಪ್ಯತಾ ನೀತಿಯ ಪ್ರಕಾರ ಉಪಯೋಗಿಸಲಾಗುತ್ತದೆ. ಈ ಪುಟವನ್ನು ನವೀಕರಿಸುವುದರ ಮೂಲಕ ಬಿಬಿಬಿಪಿಯು ಆಗಾಗ್ಗೆ ಈ ನೀತಿಯನ್ನು ಬದಲಾಯಿಸಬಹುದು. ಹೀಗೆ ಬದಲಾಗುವ ನೀತಿಗಳಿಂದ ನೀವು ಸಂತೋಷವಾಗಿದ್ದೀರಿ ಎಂದಾದರೆ ಕಾಲಕಾಲಕ್ಕೆ ಈ ಪುಟವನ್ನು ಪರಿಶೀಲಿಸುತ್ತಿರಬೇಕು. ಈ ನೀತಿಯು 8 ಫೆಭ್ರವರಿ 2013ರಿಂದ ಜಾರಿಯಲ್ಲಿದೆ.

ನಾವು ನಿಮಗೆ ಈ ಮಾಹಿತಿಯನ್ನು ಕೇಳಬಹುದು:

ಕಲೆಹಾಕಿದ ಮಾಹಿತಿಯಿಂದ ಮಾಡುವುದೇನು?

ಬಿಬಿಬಿಪಿಯು ಗ್ರಾಹಕರಿಂದ ಹಲವಾರು ಮಾಹಿತಿಯನ್ನು ಪಡೆಯುತ್ತದೆ. ಹೀಗೆ ಕಲೆಹಾಕಿದ ಮಾಹಿತಿಯು ಗ್ರಾಹಕರ ಬೇಡಿಕೆಯನ್ನು ಅರಿಯಲು, ಉತ್ತಮ ಸೇವೆಯನ್ನು ಒದಗಿಸಲು ಹಾಗೂ ಈ ಕೆಳಗಿನ ಕಾರಣಗಳಿಗೆ ಬಳಕೆಯಾಗುತ್ತದೆ:

ಭದ್ರತೆ

ಗ್ರಾಹಕರು ನೀಡಿದ ಮಾಹಿತಿಯು ಸುರಕ್ಷಿತವಾಗಿರುತ್ತದೆ ಎಂದು ಹೇಳಲು ಬಿಬಿಬಿಪಿಯು ಬದ್ಧವಾಗಿದೆ. ಗ್ರಾಹಕರ ಮಾಹಿತಿಗೆ ಅನಧಿಕೃತ ಪ್ರವೇಶ ಅಥವಾ ಗ್ರಾಹಕರ ಮಾಹಿತಿಯನ್ನು ಬಹಿರಂಗಪಡಿಸುವುದನ್ನು ತಡೆಗಟ್ಟಲು ಬಿಬಿಪಿಯು ಸೂಕ್ತ ಭೌತಿಕ, ವಿದ್ಯುನ್ಮಾನ ಮತ್ತು ವ್ಯವಸ್ಥಾಪಕ ಕಾರ್ಯವಿಧಾನಗಳನ್ನು ಕೈಗೊಂಡಿದೆ.

ಕುಕೀಸ್ ನ ಬಳಕೆ

ಕುಕೀಸ್ ಗಳು ನಿಮ್ಮ ಅನುಮತಿಯ ಮೇರೆಗೆ ಕಂಪ್ಯೂಟರ್ ಹಾರ್ಡ್ ಡ್ರೈವ್ ನಲ್ಲಿ ಇರಿಸಲ್ಪಡುವ ಚಿಕ್ಕ ಫೈಲ್ ಆಗಿದೆ. ಒಮ್ಮೆ ಅನುಮತಿ ಸಿಕ್ಕ ನಂತರ ಕುಕೀಸ್ ಗಳು ನೀವು ಭೇಟಿ ನೀಡುವ ಜಾಲತಾಣಗಳ ವೆಬ್ ಟ್ರಾಫಿಕ್ ಅನ್ನು ವಿಶ್ಲೇಷಿಸಲು ಸಹಾಯಮಾಡುತ್ತವೆ. ಕುಕೀಸ್ ಗಳು ವೆಬ್ ಅಪ್ಲಿಕೇಶನ್ ಗಳಿಗೆ ವೈಯಕ್ತಿಕವಾಗಿ ಪ್ರತಿಕ್ರಿಯಿಸಲು ಸಮ್ಮತಿಸುತ್ತವೆ. ವೆಬ್ ಅಪ್ಲಿಕೇಷನ್ ಗಳು ನಿಮ್ಮ ಆದ್ಯತೆಗಳಿಗೆ ತಕ್ಕಂತೆ ಮಾಹಿತಿಗಳನ್ನು ಕಲೆಹಾಕಿ ನಿಮ್ಮ ಬೇಕುಬೇಡಗಳನ್ನು ಅರಿತುಕೊಳ್ಳುತ್ತದೆ. ಜಾಲತಾಣದ ಯಾವ ಪುಟಗಳು ಬಳಕೆಯಾಗುತ್ತಿದೆ ಎಂಬುದನ್ನು ಗುರುತಿಸಲು ನಾವು ವೆಬ್ ಟ್ರಾಫಿಕ್ ಲಾಗ್ ಕುಕೀಸ್ ಅನ್ನು ಬಳಸುತ್ತೇವೆ. ಇದು ನಮಗೆ ವೆಬ್ ಸೈಟ್ ಡಾಟಾಗಳ ಕುರಿತು ವಿಶ್ಲೇಷಿಸಲು ಮತ್ತು ಬಳಕೆದಾರರ ಅಗತ್ಯತೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಇಂತಹ ಮಾಹಿತಿಗಳನ್ನು ಕೇವಲ ಅಂಕಿ ಅಂಶಗಳನ್ನು ವಿಶ್ಲೇಷಿಸಲು ಮಾತ್ರ ಉಪಯೋಗಿಸಿ ನಂತರದಲ್ಲಿ ಕಂಪ್ಯೂಟರ್ ನಿಂದ ತೆಗೆಯಲಾಗುತ್ತದೆ.

ಒಟ್ಟಿನಲ್ಲಿ ಕುಕೀಸ್, ಬಳಕೆದಾರರಿಗೆ ಜಾಲತಾಣದ ಯಾವ ಪುಟ ಹೆಚ್ಚು ಉಪಯುಕ್ತ ಯಾವುದು ಉಪಯುಕ್ತವಲ್ಲ ಎಂಬುದನ್ನು ಮೇಲ್ವಿಚಾರಣೆ ಮಾಡುವ ಮೂಲಕ ಉತ್ತಮ ಜಾಲತಾಣವನ್ನು ಒದಗಿಸಲು ಸಹಾಯಮಾಡುತ್ತದೆ. ನೀವು ನಮ್ಮೊಂದಿಗೆ ಹಂಚಿಕೊಂಡ ಡೇಟಾದ ಹೊರತಾಗಿ ನಿಮ್ಮ ಕಂಪ್ಯೂಟರ್ ನಲ್ಲಿರುವ ಬೇರೆ ಇನ್ಯಾವ ಮಾಹಿತಿಯನ್ನೂ ಕೂಡ ಕುಕೀಸ್ ನಮಗೆ ನೀಡುವುದಿಲ್ಲ.

ನೀವು ಕುಕೀಸ್ ಅನ್ನು 'accept' ಅಥವಾ 'decline' ಮಾಡಬಹುದು. ಹೆಚ್ಚಿನದಾಗಿ ಎಲ್ಲ ವೆಬ್ ಬ್ರೌಸರ್ ಗಳು ಕುಕೀಸ್ ಅನ್ನು 'accept' ಮಾಡುತ್ತವೆ. ನೀವು ಬಯಸಿದಲ್ಲಿ ಕುಕೀಸ್ ಅನ್ನು ವೆಬ್ ಬ್ರೌಸರ್ ನ ಸೆಟ್ಟಿಂಗ್ ಬದಲಾಯಿಸುವುದರ ಮೂಲಕ 'decline' ಮಾಡಬಹುದು. ಇದರಿಂದ ನಿಮಗೆ ವೆಬ್ ಸೈಟ್ ನ ಪೂರ್ಣ ಉಪಯೋಗ ಪಡೆಯಲಾಗುವುದಿಲ್ಲ.

ಇತರ ಜಾಲತಾಣಗಳಿಗೆ ಲಿಂಕ್ ಗಳು

ನಮ್ಮ ಜಾಲತಾಣ ಬೇರೆ ಜಾಲತಾಣಗಳಿಗೆ ಲಿಂಕ್ ಗಳನ್ನು ಹೊಂದಿರಬಹುದು. ಅಂತಹ ಲಿಂಕ್ ಗಳನ್ನು ನೀವು ಉಪಯೋಗಿಸಿದಲ್ಲಿ ಆ ಜಾಲತಾಣದ ಮೇಲೆ ನಮಗೆ ಯಾವುದೇ ಹಿಡಿತವಿರುವುದಿಲ್ಲ. ಹಾಗಾಗಿ ಅಂತಹ ಜಾಲತಾಣಗಳಿಗೆ ನೀವು ಭೇಟಿ ನೀಡಿದಾಗ ನೀವು ನೀಡಿದ ಯಾವುದೇ ಮಾಹಿತಿಯ ರಕ್ಷಣೆ ಮತ್ತು ಗೌಪ್ಯತೆಗೆ ನಾವು ಜವಾಬ್ದಾರರಲ್ಲ. ಯಾವುದೇ ಜಾಲತಾಣವನ್ನು ಪ್ರವೇಶಿಸುವಾಗ ನೀವು ಎಚ್ಚರಿಕೆಯಿಂದ ಇರಬೇಕು ಮತ್ತು ಅದರಲ್ಲಿ ಅನ್ವಯವಾಗುವ ಗೌಪ್ಯತಾ ಹೇಳಿಕೆಗಳ ಬಗ್ಗೆ ತಿಳಿದುಕೊಳ್ಳಬೇಕು.

ನಿಮ್ಮ ವೈಯಕ್ತಿಕ ಮಾಹಿತಿಗಳ ನಿಯಂತ್ರಣ

ಈ ಕೆಳಗಿನ ವಿಧಾನಗಳಲ್ಲಿ ನೀವು ನಿಮ್ಮ ವೈಯಕ್ತಿಕ ಮಾಹಿತಿಯ ಬಳಕೆ ಅಥವಾ ಸಂಗ್ರಹಣೆಯನ್ನು ನಿರ್ಬಂಧಿಸಬಹುದು:

ನಾವು ನಿಮ್ಮ ಅನುಮತಿಯಿಲ್ಲದೆ ಅಥವಾ ಕಾನೂನಿಗೆ ಅಗತ್ಯವಿಲ್ಲದೆ ಮೂರನೇ ವ್ಯಕ್ತಿಗೆ ನಿಮ್ಮ ವೈಯಕ್ತಿಯ ಮಾಹಿತಿಯನ್ನು ಮಾರುವುದಾಗಲೀ, ಹಂಚುವುದಾಗಲೀ ಅಥವಾ ಗುತ್ತಿಗೆ ನೀಡುವುದಾಗಲೀ ಮಾಡುವುದಿಲ್ಲ. ಮೂರನೇ ವ್ಯಕ್ತಿಗಳ ಪ್ರಚಾರ ಮಾಹಿತಿಯನ್ನು ಕಳುಹಿಸಲು ನೀವು ಬಯಸಿದ್ದಲ್ಲಿ ಮಾತ್ರ ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸಬಹುದು. ಡೇಟಾ ಪ್ರೊಟೆಕ್ಷನ್ ನಿಯಮ 1998ರ ಅಡಿಯಲ್ಲಿ ನಿಮ್ಮ ಬಗ್ಗೆ ನಾವು ಹೊಂದಿರುವ ವೈಯಕ್ತಿಕ ವಿವರಗಳನ್ನು ನೀವು ವಿನಂತಿಸಬಹುದು. ಇದಕ್ಕಾಗಿ ಅಲ್ಪ ಪ್ರಮಾಣದ ಶುಲ್ಕವನ್ನು ನೀವು ಭರಿಸಬೇಕಾಗುತ್ತದೆ. ನಿಮ್ಮ ಕುರಿತಾದ ಮಾಹಿತಿಗಳ ನಕಲನ್ನು ಪಡೆಯಬೇಕಾದರೆ ವ್ಯವಸ್ಥಾಪಕ ನಿರ್ದೇಶಕರು, ಬನ್ನೇರುಘಟ್ಟ ಜೈವಿಕ ಉದ್ಯಾನವನ ಬೆಂಗಳೂರು ಬನ್ನೇರುಘಟ್ಟ , ಬೆಂಗಳೂರು - 560083, ಕರ್ನಾಟಕ, ಭಾರತಕ್ಕೆ ವಿನಂತಿ ಪತ್ರ ಬರೆಯಬಹುದು. ನಮ್ಮ ಬಳಿ ಇರುವ ಮಾಹಿತಿಯು ನಿಮಗೆ ತಪ್ಪೆನಿಸಿದಲ್ಲಿ ಪತ್ರ ಮುಖೇನ ಅಥವಾ ಇ ಮೇಲ್ ಮೂಲಕ ನಮ್ಮನ್ನು ಸಂಪರ್ಕಿಸಿ. ಅಂತಹ ಮಾಹಿತಿಯನ್ನು ನಾವು ತಿದ್ದುಪಡಿ ಮಾಡುತ್ತೇವೆ.

ಸಂಪರ್ಕ ಮಾಹಿತಿ

ಗೌಪ್ಯತಾ ಮಾಹಿತಿಯ ಕುರಿತು ಯಾವುದೇ ಪ್ರಶ್ನೆಗಳಿದ್ದಲ್ಲಿ ಈ ಕೆಳಗಿನ ಮಾಹಿತಿಯನ್ನು ಪಡೆಯಬಹುದು:

ಬನ್ನೇರುಘಟ್ಟ ಜೈವಿಕ ಉದ್ಯಾನವನ ಬೆಂಗಳೂರು

ಕಾರ್ಯನಿರ್ವಾಹಕ ನಿರ್ದೇಶಕರು,
ಬನ್ನೇರುಘಟ್ಟ ಜೈವಿಕ ಉದ್ಯಾನವನ ಬೆಂಗಳೂರು ಬನ್ನೇರುಘಟ್ಟ,
ಬೆಂಗಳೂರು – 560083, ಕರ್ನಾಟಕ, ಭಾರತ.
ದೂರವಾಣಿ : 080 – 27828300, 27828540
ಮೊಬೈಲ್ : 8884414268 / 8884414269
ಇ ಮೇಲ್ : bannerghattazoo@gmail.com