ನಿಸರ್ಗದ ಮಧ್ಯೆ ಮುಕ್ತವಾಗಿ ಸಂಚರಿಸುವ ಪ್ರಾಣಿಗಳ ವೀಕ್ಷಣೆಯನ್ನು ಸಫಾರಿ ಎನ್ನಬಹುದು. ಪ್ರವಾಸಿಗರನ್ನು ಸುರಕ್ಷಿತ ಸಫಾರಿ ವಾಹನಗಳಲ್ಲಿ ಕಾಡಿನೊಳಗೆ ಕರೆದೊಯ್ದು ವನ್ಯಜೀವಿಗಳನ್ನು ತೀರ ಸಮೀಪದಿಂದ ತೋರಿಸುತ್ತಾರೆ. ಹೀಗೆ ವನ್ಯ ಮೃಗಗಳನ್ನು ಹತ್ತಿರದಿಂದ ನೋಡುವುದು ರೋಮಾಂಚಕವಾಗಿರುತ್ತದೆ. ಇಂತಹ ಸೌಲಭ್ಯವನ್ನು ನಾವು ಕೆಲವೇ ಕೆಲವು ಅಭಯಾರಣ್ಯಗಳಲ್ಲಿ ಮಾತ್ರ ಕಾಣಬಹುದು. ಪ್ರವಾಸಿಗರು ಕಾಡು ಹಾಗೂ ವನ್ಯಜೀವಿಗಳ ಮಧ್ಯೆ ಬೆರೆತು ಒಂದು ಹೊಸ ಅನುಭವ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಇದೇ ಉದ್ದೇಶದಿಂದ ಕಾಡಿನ ಮಧ್ಯೆ ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು ವಿನ್ಯಾಸ ಮಾಡಲಾಗಿದ್ದು ಇದು ಡಾಂಬರ್ ರಸ್ತೆಯ ಮೂಲಕ ರಾಗಿಹಳ್ಳಿ ರಕ್ಷಿತ ಅರಣ್ಯವನ್ನು ಸಂಧಿಸುತ್ತದೆ. ಈ ಮಾರ್ಗ ಚಿತ್ತಾಕರ್ಷಕ ಹಸಿರು ಕಾಡು, ಸರಪಳಿಯಂತಹ ಬೆಟ್ಟಗಳು, ಗುಡ್ಡ ಬಂಡೆ ಮತ್ತು ಕಣಿವೆಗಳಿಂದ ಕೂಡಿದ್ದು ನೋಡುಗರ ಮನಸ್ಸಿಗೆ ಮುದ ನೀಡುತ್ತದೆ. ಪ್ರಮುಖವಾಗಿ ಈ ಉದ್ಯಾನ ವನ್ಯ ಜೀವಿಗಳ ವೀಕ್ಷಣೆ, ನರಭಕ್ಷಕ ಹಾಗೂ ಇತರ ಪ್ರಾಣಿಗಳನ್ನು ನೋಡಲು, ಆನಂದಿಸಲು ಮತ್ತು ಅವುಗಳ ಕುರಿತು ಅಭ್ಯಸಿಸಲು ಅವಕಾಶ ಕಲ್ಪಿಸಿದೆ.
1979ರಲ್ಲಿ ರಾಗಿಹಳ್ಳಿ ರಕ್ಷಿತ ಅರಣ್ಯದ ಮುಕ್ತ ಆವರಣದಲ್ಲಿ ಲಯನ್ ಸಫಾರಿಯನ್ನು ಸುಮಾರು 5.00 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ 5.00 ಹೆಕ್ಟೇರ್ ಅರಣ್ಯದಲ್ಲಿ ಸುಮಾರು 15 ಅಡಿ ಎತ್ತರವಿರುವ ಸರಪಳಿಯ ಜಾಲರಿಯನ್ನು ಹಾಕಲಾಗಿದೆ. ಕಾಡು ಪ್ರಾಣಿಗಳ ದಾಳಿಯನ್ನು ತಪ್ಪಿಸಲು ಜಾಲರಿಯ ಸುತ್ತಲೂ ದೊಡ್ಡ ಕಂದಕಗಳನ್ನು ತೆಗೆದಿದ್ದಾರೆ. ಎಲ್ಲ ಪ್ರಾಣಿಗಳಿಗೆ ತಂಗಲು 11 ಚಿಕ್ಕ ಮನೆಗಳನ್ನು ನಿರ್ಮಿಸಲಾಗಿದೆ. ಕೆಲವು ಆಯ್ದ ಪ್ರಾಣಿಗಳ ಗುಂಪನ್ನು ಮಾತ್ರ ಸರತಿಯ ಮೂಲಕ ಸಫಾರಿಯ ಸಮಯದಲ್ಲಿ ವೀಕ್ಷಿಸಬಹುದಾಗಿದೆ.
ನಿಸರ್ಗದ ಮಧ್ಯೆ ಮುಕ್ತವಾಗಿ ಸಂಚರಿಸುವ ಪ್ರಾಣಿಗಳ ವೀಕ್ಷಣೆಯನ್ನು ಸಫಾರಿ ಎನ್ನಬಹುದು. ಪ್ರವಾಸಿಗರನ್ನು ಸುರಕ್ಷಿತ ಸಫಾರಿ ವಾಹನಗಳಲ್ಲಿ ಕಾಡಿನೊಳಗೆ ಕರೆದೊಯ್ದು ವನ್ಯಜೀವಿಗಳನ್ನು ತೀರ ಸಮೀಪದಿಂದ ತೋರಿಸುತ್ತಾರೆ. ಹೀಗೆ ವನ್ಯ ಮೃಗಗಳನ್ನು ಹತ್ತಿರದಿಂದ ನೋಡುವುದು ರೋಮಾಂಚಕವಾಗಿರುತ್ತದೆ. ಇಂತಹ ಸೌಲಭ್ಯವನ್ನು ನಾವು ಕೆಲವೇ ಕೆಲವು ಅಭಯಾರಣ್ಯಗಳಲ್ಲಿ ಮಾತ್ರ ಕಾಣಬಹುದು. ಪ್ರವಾಸಿಗರು ಕಾಡು ಹಾಗೂ ವನ್ಯಜೀವಿಗಳ ಮಧ್ಯೆ ಬೆರೆತು ಒಂದು ಹೊಸ ಅನುಭವ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಇದೇ ಉದ್ದೇಶದಿಂದ ಕಾಡಿನ ಮಧ್ಯೆ ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು ವಿನ್ಯಾಸ ಮಾಡಲಾಗಿದ್ದು ಇದು ಡಾಂಬರ್ ರಸ್ತೆಯ ಮೂಲಕ ರಾಗಿಹಳ್ಳಿ ರಕ್ಷಿತ ಅರಣ್ಯವನ್ನು ಸಂಧಿಸುತ್ತದೆ. ಈ ಮಾರ್ಗ ಚಿತ್ತಾಕರ್ಷಕ ಹಸಿರು ಕಾಡು, ಸರಪಳಿಯಂತಹ ಬೆಟ್ಟಗಳು, ಗುಡ್ಡ ಬಂಡೆ ಮತ್ತು ಕಣಿವೆಗಳಿಂದ ಕೂಡಿದ್ದು ನೋಡುಗರ ಮನಸ್ಸಿಗೆ ಮುದ ನೀಡುತ್ತದೆ. ಪ್ರಮುಖವಾಗಿ ಈ ಉದ್ಯಾನ ವನ್ಯ ಜೀವಿಗಳ ವೀಕ್ಷಣೆ, ನರಭಕ್ಷಕ ಹಾಗೂ ಇತರ ಪ್ರಾಣಿಗಳನ್ನು ನೋಡಲು, ಆನಂದಿಸಲು ಮತ್ತು ಅವುಗಳ ಕುರಿತು ಅಭ್ಯಸಿಸಲು ಅವಕಾಶ ಕಲ್ಪಿಸಿದೆ.
ಹೊರ ಆವರಣದಲ್ಲಿ ತೆರೆದ ಕಂದಕ ಹಾಗೂ ಸರಪಳಿಯ ಜಾಲರಿಯನ್ನು ಎಲ್ಲ ಮೂರು ಘಟಕಗಳಿಗೂ ನಿರ್ಮಿಸಲಾಗಿದೆ. ಇಂದಿರಾಗಾಂಧಿ ಹುಲಿ ಸಫಾರಿಯು 11 ಆಶ್ರಯ ತಾಣಗಳನ್ನು ಹೊಂದಿದೆ. ಅಪ್ಪಯ್ಯ ಹುಲಿ ಸಫಾರಿಯು 2 ವಸತಿ ಸಾಂಗಕಿರಣ ಹೊಂದಿದೆ. ಈ ಮನೆಗಳಲ್ಲಿ ಒಟ್ಟೂ 10 ಹೋಲ್ಡಿಂಗ್ ಕೊಠಡಿಗಳಿವೆ. ಬಿಳಿ ಹುಲಿ ಸಫಾರಿಯಲ್ಲಿ 2 ವಸತಿ ಸಂಕಿರಣ ನಿರ್ಮಾಣ ಮಾಡಲಾಗಿದೆ. ಅಲ್ಲಿ ಒಟ್ಟೂ 8 ಆಶ್ರಯ ತಾಣಗಳಿವೆ. ಈ ಎಲ್ಲ ಕೊಠಡಿಗಳಿವೆ ನೀರು ಮತ್ತು ನೈರ್ಮಲ್ಯತೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಕೆಲವು ಆಯ್ದ ಪ್ರಾಣಿಗಳ ಗುಂಪನ್ನು ಮಾತ್ರ ಪಾಳಿಯ ಮೂಲಕ ಸಫಾರಿಯ ಸಮಯದಲ್ಲಿ ಪ್ರವಾಸಿಗರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಇದು ಬನ್ನೇರುಘಟ್ಟ ಸುರಕ್ಷಿತ ಅರಣ್ಯ (ಬಿ ಆರ್ ಎಫ್)ದ 68.00 ಪ್ರದೇಶದಲ್ಲಿ ಆವರಿಸಿದೆ. ಸಸ್ಯಾಹಾರಿ ಸಫಾರಿಯು 1970ರ ದಶಕದಲ್ಲಿಯೇ ಅಭಿವೃದ್ಧಿಯಾಯಿತೆಂದು ನಂಬಲಾದರೂ, 2002ರಲ್ಲಿ ಇದನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಯಿತು. ಇಡೀ ಪ್ರದೇಶದಲ್ಲಿ ಸೌರಶಕ್ತಿಯ ಬೇಲಿ, ಆಳವಾದ ಕಂದಕ ಮತ್ತು ಕಲ್ಲಿನ ಗೋಡೆಗಳ ನಿರ್ಮಾಣ ಮಾಡಲಾಗಿದೆ. ಸಫಾರಿಯಲ್ಲಿ ಕಾಣಬಹುದಾದ ಸಸ್ಯವರ್ಗವು ಸಸ್ಯಹಾರಿ ಪ್ರಾಣಿಗಳಿಗೆ ಆಹಾರ ಒದಗಿಸುತ್ತದೆ. ಬಿದಿರು ಮತ್ತು ಅನೋಗಾಸ್ಸಿಯಸ್ ನಂತಹ ಹೆಚ್ಚಿನ ಮೇವು ನೀಡುವ ಜಾತಿಯ ಸಸ್ಯಗಳಿವೆ. ಹುಲ್ಲುಗಾವಲಿನಲ್ಲಿ ಸಾಮಾನ್ಯವಾಗಿ ಕಾಣಸಿಗುವ ಸಚರಾಮ್, ಸಿಂಬೊಪೊಗನ್ ಮತ್ತು ಹೆಟೆರೊಪೊಗನ್ ಗಳು ಮುಖ್ಯ ಮೇವುಗಳಾಗಿವೆ. ಸಫಾರಿಯ ಸಮಯದಲ್ಲಿ ಅಲ್ಲಲ್ಲಿ ಶೊರಿಯಾ ಟೆಲುರಾದ ಕೆಲವು ಸಸ್ಯಗಳು ಕಂಡುಬರುತ್ತವೆ. ಇವು ಪ್ರಾಣಿಗಳಿಗೆ ನೆರಳನ್ನು ನೀಡುತ್ತದೆ. ಇಲ್ಲಿ ಒಟ್ಟೂ 5 ಜಲಪ್ರದೇಶಗಳಿದ್ದು ದೀಪನಕೆರೆ, ಚೆನ್ನಮ್ಮನಕೆರೆ, ಗೌಡನಕೆರೆ ಮತ್ತು ಸೀಗಡಿಕುಂಟೆ ಎಂಬ ಹೆಸರುಗಳನ್ನು ಹೊಂದಿದೆ. ಈ ಜಲಸಂಪತ್ತುಗಳು ಎಲ್ಲಾ ಋತುಗಳಲ್ಲಿ ಪ್ರಾಣಿಗಳಿಗೆ ನೀರೊದಗಿಸುತ್ತವೆ. ಸಫಾರಿಯಲ್ಲಿ ಗೌರ್, ಸಾಂಬಾರ್, ಚೀತಲ್, ಕೂಗುವ ಕರಡಿ, ಬ್ಲ್ಯಾಕ್ ಬಕ್ ಮತ್ತು ನೀಲ್ಗೈ ಗಳು ಕಂಡುಬರುತ್ತವೆ. ಇವುಗಳ ಹೊರತಾಗಿ ಕಾಡು ಹಂದಿ, ಮುಳ್ಳು ಹಂದಿ, ಪಾಂಗೋಲಿನ್ ಗಳು ಇಲ್ಲಿ ಆಶ್ರಯ ಪಡೆದಿವೆ.
2002ರಲ್ಲಿ ರಾಗಿಹಳ್ಳಿ ರಾಜ್ಯ ಅರಣ್ಯ ಪ್ರದೇಶದಲ್ಲಿ 18.00 ಹೆಕ್ಟೇರ್ ಪ್ರದೇಶದಲ್ಲಿ ಕರಡಿ ಸಫಾರಿಯನ್ನು ಸ್ಥಾಪಿಸಲಾಗಿದೆ. ಸಫಾರಿಯ ಪ್ರದೇಶದ ಹೊರಗೆ ಆಳವಾದ ಕಂದಕವನ್ನು ತೆಗೆಯಲಾಗಿದೆ. ಕರಡಿಗಳು ತಪ್ಪಿಸಿಕೊಂಡು ಹೋಗಬಾರದೆಂದು ಕಂದಕದ ಹೊರಗೆ ಕಲ್ಲಿನ ಗೋಡೆಗಳನ್ನು ನಿರ್ಮಿಸಲಾಗಿದೆ. ಈ ಸಫಾರಿಯಲ್ಲಿ ಪ್ರಾಣಿಗಳ ವಸತಿಗೃಹ ವ್ಯವಸ್ಥೆಯನ್ನು ಮಾಡಲಾಗಿದ್ದು ಅವುಗಳು ಪಂಚವಟಿ, ಚಿತ್ರಕೂಟ, ಕಿಷ್ಕಿಂದ, ಡಾ. ಜಿಕೆವಿ ಮತ್ತು ಜಾಂಬವ ಎಂಬ ಹೆಸರನ್ನು ಹೊಂದಿವೆ. ಇಲ್ಲಿ ಸುಮಾರು 100 ಪ್ರಾಣಿಗಳ ಕೊಠಡಿಗಳಿದ್ದು ಅಡಿಗೆಮನೆ ವ್ಯವಸ್ಥೆಯನ್ನು ಕೂಡ ಹೊಂದಿದೆ. ಈ ಅರಣ್ಯ ಪ್ರದೇಶದಲ್ಲಿ ಹಣ್ಣುಗಳ ಮರಗಳ ಜೊತೆಗೆ ಕರಡಿಗಳಿಗೆ ನೈಸರ್ಗಿಕ ಆವಾಸಸ್ಥಾನಗಳನ್ನು ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
2005ರಲ್ಲಿ ಭಾರತದಾದ್ಯಂತ ಮದ್ಹಾರಿಗಳಿಂದ ರಕ್ಷಿಸಲ್ಪಟ್ಟ ಹಲವಾರು ಕರಡಿಗಳನ್ನು ಇಲ್ಲಿ ಸಂರಕ್ಷಿಸಲಾಗುತ್ತಿದೆ. ವನ್ಯಜೀವಿ ಎಸ್ ಒಎಸ್ ಇವುಗಳ ನಿರ್ವಹಣೆ ಮಾಡುತ್ತದೆ.