ಮಂಗಳವಾರ ರಜೆ

ನಮ್ಮ ಗೌರವಾನ್ವಿತ ದತ್ತುದಾರರು / ದಾನಿಗಳು (ವಿವರಗಳಿಗಾಗಿ ಪಟ್ಟಿ ಇಲ್ಲಿ ಕ್ಲಿಕ್ ಮಾಡಿ)

ಬಿಬಿಬಿಪಿ ಎಂದೇ ಪ್ರಖ್ಯಾತವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನ ಬೆಂಗಳೂರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅವಿಭಾಜ್ಯ ಅಂಗವಾಗಿದೆ. 2002 ರಲ್ಲಿ ಸ್ವತಂತ್ರವಾಗಿ ತಲೆ ಎತ್ತಿದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಮೊದಲು 545.00 ಹೆಕ್ಟೇರ್ ವಿಸ್ತೀರ್ಣದಲ್ಲಿ ವ್ಯಾಪಿಸಿತ್ತು. ನಂತರದಲ್ಲಿ ಪರಿಸರ-ಮನರಂಜನೆ, ಪರಿಸರ-ಪ್ರವಾಸೋದ್ಯಮ ಮತ್ತು ಸಂರಕ್ಷಣೆಯ ನಿಟ್ಟಿನಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು (ZAK), ಕರ್ನಾಟಕ ಸರ್ಕಾರ(GOK) ಮತ್ತಷ್ಟು ಓದು... ...
ಬನ್ನೇರುಘಟ್ಟ ಜೈವಿಕ ಉದ್ಯಾನವನವು ಸುಮಾರು 731.88 ಹೆಕ್ಟರ್ ಪ್ರದೇಶ ವ್ಯಾಪ್ತಿ ಹೊಂದಿದ್ದು ಮೃಗಾಲಯ, ಸಫಾರಿ, ಚಿಟ್ಟೆ ಉದ್ಯಾನ ಮತ್ತು ಪುನರ್ವಸತಿ ಕೇಂದ್ರಗಳಂತಹ 4 ವಿಭಿನ್ನ ಘಟಕಗಳನ್ನು ಹೊಂದಿದೆ. ಜೈವಿಕ ಉದ್ಯಾನವನದ ಚಟುವಟಿಕೆಗಳು ವೈಜ್ಞಾನಿಕ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳನ್ನು ಹೊಂದಿದ್ದು, ಇದು ರಾಜ್ಯ/ದೇಶದ ಪ್ರಮುಖ ಮೃಗಾಲಯಗಳಲ್ಲಿ ಒಂದಾಗಿದೆ. ಜೈವಿಕ ಉದ್ಯಾನವನದಲ್ಲಿ ಚಾಲ್ತಿಯಲ್ಲಿರುವ ಚಟುವಟಿಕೆಗಳು ಮೃಗಾಲಯದ ನಿರ್ವಹಣೆ - ಇಲ್ಲಿ ಉತ್ತಮವಾಗಿ ನಿರ್ವಹಿಸಲ್ಪಟ್ಟ ಆವರಣಗಳಲ್ಲಿ ವಿವಿಧ ಪಕ್ಷಿಗಳು, ಸರೀಸೃಪಗಳು ಮತ್ತು ಸಸ್ತನಿಗಳನ್ನು ನಿರ್ವಹಣೆ ಮಾಡಲಾಗುತ್ತಿದೆ; ಸಫಾರಿಗಳ ಚಾಲನೆ ಮತ್ತು ನಿರ್ವಹಣೆ - ಪ್ರವಾಸಿಗರನ್ನು ಸುರಕ್ಷಿತ ಸಫಾರಿ ವಾಹನಗಳಲ್ಲಿ ಕಾಡಿನೊಳಗೆ ಕರೆದೊಯ್ದು ವನ್ಯಜೀವಿಗಳನ್ನು ತೀರ ಸಮೀಪದಿಂದ ಅಂದರೆ ಹುಲಿಗಳು, ಸಿಂಹಗಳು, ಕರಡಿಗಳು ಮತ್ತು ಸಸ್ಯಹಾರಿ ಸಫಾರಿ ಮತ್ತು ಅಳಿವಿನಂಚಿನಲ್ಲಿರುವ ಜಾತಿಯ ಪ್ರಾಣಿಗಳ ಸಂತಾನೋತ್ಪತ್ತಿ; ರಕ್ಷಿಸಿದ ಪ್ರಾಣಿಗಳಾದ ಹುಲಿ, ಸಿಂಹ, ಕರಡಿ ಮೊದಲಾದ ಪ್ರಾಣಿಗಳ ಜೀವಮಾನದ ಸೌಲಭ್ಯಗಳನ್ನು ಒದಗಿಸಲು ಪುನರ್ವಸತಿ ಕೇಂದ್ರ; ಚಿಟ್ಟೆ ಉದ್ಯಾನ; ಕಾಡಿನಲ್ಲಿರುವ ಸಸ್ಯ ಮತ್ತು ಪ್ರಾಣಿಗಳ ಬಗ್ಗೆ ಅಧ್ಯಯನ ನಡೆಸಲು ಪ್ರಕೃತಿ ಶಿಬಿರ; ಪ್ರಾಣಿಗಳ ಆಹಾರ ಮತ್ತು ಆರೋಗ್ಯ ನಿರ್ವಹಣೆ; ಜೈವಿಕ ಉದ್ಯಾನವನದ ಎಲ್ಲಾ ವ್ಯವಹಾರಗಳನ್ನು ನಿರ್ವಹಿಸಲು ವ್ಯವಸ್ಥಿತ ಆಡಳಿತ ಒಳಗೊಂಡಿರುತ್ತದೆ.

ಪೂರ್ವಸಿದ್ಧತೆ

  • ಪ್ರಕೃತಿಯೊಂದಿಗೆ ವಿಲೀನಗೊಳ್ಳುವ ಬಟ್ಟೆಗಳನ್ನು ಧರಿಸಿ. ಗಾಡ ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ
  • ಆರಾಮದಾಯಕ ಬೂಟುಗಳನ್ನು, ಬ್ಯಾಗ್, ನೀರಿನ ಬಾಟಲ್, ಟೋಪಿ, ಹೆಡ್ ಫೋನ್, ರೇನ್ಕೋಟ್ ಇತ್ಯಾದಿಗಳನ್ನು ತಮ್ಮೊಂದಿಗೆ ತನ್ನಿರಿ. ನೀವು ಸುಮಾರು 2 ರಿಂದ 3 ಕೀ.ಮೀ ಮೃಗಾಲಯದಲ್ಲಿ ನಡೆಯಬೇಕಾಗಿರುತ್ತದೆ.
  • ಸಫಾರಿ ಟಿಕೆಟ್‌ಗಳು ಸಂಖ್ಯೆಯಲ್ಲಿ ಸೀಮಿತವಾಗಿವೆ.
  • ಸೌಲಭ್ಯಗಳು: ಲಗೇಜ್ ರೂಮ್, ಗಾಲಿಕುರ್ಚಿಗಳು, ಛತ್ರಿಗಳು, ಕಾಗದದ ಚೀಲಗಳು, ಮಾಹಿತಿ ಕಿಯೋಸ್ಕ್ ಇತ್ಯಾದಿ
  • ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಿ.
  • ಮೃಗಾಲಯದೊಳಗೆ ಏಕ ಮಾತ್ರ ಬಳಕೆಯ ಪ್ಲಾಸ್ಟಿಕ್ ಕವರ್/ವಸ್ತುಗಳನ್ನು ಅನುಮತಿಸಲಾಗುವುದಿಲ್ಲ. ಅಂತಹ ವಸ್ತುಗಳನ್ನು ಪ್ರವೇಶದ್ವಾರದಲ್ಲಿ ಕಾಗದದ ಚೀಲದಿಂದ ಬದಲಾಯಿಸಲಾಗುತ್ತದೆ.
  • ಬಿಬಿಪಿ ಭೇಟಿ ನೀಡಲು ಸುರಕ್ಷಿತ ಸ್ಥಳವಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ.
  • ಮುಕ್ತವಾಗಿ ವಿಹರಿಸುತ್ತಿರುವ ಕೋತಿಗಳು ಆಹಾರ ಪದಾರ್ಥಗಳನ್ನು, ಪಾನಿಯಗನ್ನು ಕಸಿದುಕೊಳ್ಳುವುದನ್ನು ತಪ್ಪಿಸಲು ಬ್ಯಾಗ್ನಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳುವುದು
  • ನೀವು ತರುವ ವಸ್ತುಗಳಿಂದ ಆಗುವ ಯಾವುದೇ ರೀತಿಯ ತ್ಯಾಜ್ಯವನ್ನು ಹಿಂದಕ್ಕೆ ಕೊಂಡೊಯ್ಯಲು ಮತ್ತು ಅದನ್ನು ಬಿಬಿಎಂಪಿ ಮಿತಿಯಲ್ಲಿ ವಿಲೇವಾರಿ ಮಾಡಲು ನಾವು ನಿಮ್ಮನ್ನು ಪ್ರೋಸ್ತಾಹಿಸುತ್ತೇವೆ.
  • ಪ್ರತಿಯೊಬ್ಬರೂ ಉದ್ಯಾನದಲ್ಲಿ ಸಮೃದ್ಧ, ಶೈಕ್ಷಣಿಕ ಅನುಭವವನ್ನು ಬಯಸುತ್ತಾರೆ!

ಸಾಮಾಜಿಕ ಜಾಲ ತಾಣ