ಫಾಸಿಯಾನಿಡೆ
ಸಾಮಾನ್ಯ ಹೆಸರು – ಸಿಲ್ವರ್ ಫೆಸೆಂಟ್
Scientific Name – Lophura nycthemera
ಆವಾಸಸ್ಥಾನ – ಎತ್ತರದ ಅರಣ್ಯ ಪ್ರದೇಶಗಳು ಮತ್ತು ಅರಣ್ಯ ಅಂಚಿನ ಪ್ರದೇಶಗಳು
ನೈಸರ್ಗಿಕ ಆಹಾರ – ದಾನ್ಯಗಳು, ಹಣ್ಣುಗಳು, ಹುಳುಗಳು, ಕಾಳುಗಳು ಮತ್ತು ಅಕಶೇರುಕಗಳು
ಮೃಗಾಲಯದ ಆಹಾರ – ಮಿಶ್ರ ದಾನ್ಯಗಳು, ಜೋಳ, ಗೋಧಿ, ಬಾಜ್ರ, ಕೊತ್ತಂಬರಿ ಸೊಪ್ಪು,
ಸೋಯಾ ಬೀನ್, ರಾಗಿ, ಕೋಳಿ ಆಹಾರ ಮತ್ತು ಮೆಕ್ಕೆ ಜೋಳ
ನಿಮಗೆ ಗೊತ್ತಾ - ಸಿಲ್ವರ್ ಫೆಸೆಂಟ್ ಗಳು ಸಾಮಾನ್ಯವಾಗಿ ಜೋರಾದ ಶಿಳ್ಳೆ ಮತ್ತುಏರು ಧ್ವನಿಯಲ್ಲಿ ಚಿಲಿ-ಪಿಲಿ ಶಬ್ಧವನ್ನು ಮಾಡುತ್ತವೆ. ಪ್ರಣಯದ ಸಮಯದಲ್ಲಿ ಇವು ಕೂಗುತ್ತವೆ ಮತ್ತು ಗೊಣಗುತ್ತವೆ.



ಸಾಮಾನ್ಯ ಹೆಸರು – ಹಳದಿ ಗೋಲ್ಡನ್ ಫೆಸೆಂಟ್
Scientific Name – Chrysolophus pictus
ಆವಾಸಸ್ಥಾನ – ಪರ್ವತ ಪ್ರದೇಶಗಳಲ್ಲಿನ ದಟ್ಟವಾದ ಕೊನಿಫೆರಸ್ ಕಾಡುಗಳು ಮತ್ತು
ದಟ್ಟವಾದ ಪೊದೆಗಳ ಮಿಶ್ರ ಕಾಡುಗಳು.
ನೈಸರ್ಗಿಕ ಆಹಾರ – ದಾನ್ಯಗಳು, ಹಣ್ಣುಗಳು, ಹುಳುಗಳು, ಕಾಳುಗಳು, ವಿವಿಧ ರೀತಿಯ
ಸಸ್ಯವರ್ಗ, ಎಲೆಗಳು ಮತ್ತು ಅಕಶೇರುಕಗಳು.
ಮೃಗಾಲಯದ ಆಹಾರ - ಮಿಶ್ರ ದಾನ್ಯಗಳು, ಗೋಧಿ, ಜೋಳ, ಬಾಜ್ರ, ಕೊತ್ತಂಬರಿ ಸೊಪ್ಪು,
ಸೋಯಾ ಬೀನ್, ರಾಗಿ, ಕೋಳಿ ಆಹಾರ ಮತ್ತು ಮೆಕ್ಕೆ ಜೋಳ.
ನಿಮಗೆ ಗೊತ್ತಾ - ಮೃಗಾಲಯಗಳು ಹಾಗು ಇತರೆ ಪಕ್ಷಿ ಸಾಕಾಣಿಕೆ ಕೇಂದ್ರಗಳಲ್ಲಿ ಬೆಳೆಸಲಾದ
ಗೋಲ್ಡನ್ ಫೆಸೆಂಟ್ ನ ಜನಪ್ರಿಯ ಬಣ್ಣದ ರೂಪಾಂತರ ಹಳದಿ ಗೋಲ್ಡನ್ ಫೆಸೆಂಟ್. ಇವುಗಳನ್ನು “ಘಿಗಿಯ” ಚಿನ್ನ ಎಂದು ಕರೆಯಲಾಗುತ್ತದೆ.



ಸಾಮಾನ್ಯ ಹೆಸರು – ಲೇಡಿ ಅಮ್ಹೆರ್ಸ್ಟ್ ಫೆಸೆಂಟ್
Scientific Name – Chrysolophus amherstiae
ಆವಾಸಸ್ಥಾನ – ಅರಣ್ಯ ಪ್ರದೇಶಗಳು, ಬಿದಿರು ಪೊದೆಗಳು, ಬೆಟ್ಟಗಳು ಮತ್ತು ದಟ್ಟವಾದ
ಪೊದೆ ಪ್ರದೇಶಗಳು
ನೈಸರ್ಗಿಕ ಆಹಾರ – ದಾನ್ಯಗಳು, ಹಣ್ಣುಗಳು, ಹುಳುಗಳು, ಕಾಳುಗಳು, ವಿವಿಧ ರೀತಿಯ
ಸಸ್ಯವರ್ಗ, ಎಲೆಗಳು ಮತ್ತು ಅಕಶೇರುಕಗಳು
ಮೃಗಾಲಯದ ಆಹಾರ - ಮಿಶ್ರ ದಾನ್ಯಗಳು, ಜೋಳ, ಗೋಧಿ, ಬಾಜ್ರ, ಕೊತ್ತಂಬರಿ ಸೊಪ್ಪು,
ಸೋಯಾ ಬೀನ್, ರಾಗಿ, ಕೋಳಿ ಆಹಾರ ಮತ್ತು ಮೆಕ್ಕೆ ಜೋಳ
ನಿಮಗೆ ಗೊತ್ತಾ - ಲೇಡಿ ಅಮ್ಹೆರ್ಸ್ಟ್ ಫೆಸೆಂಟ್ ಗಳನ್ನು ಎತ್ತರದ ವಲಸೆ ಪಕ್ಷಿಗಳೆಂದು ಕರೆಯಲಾಗುತ್ತದೆ.
ಅನುಕೂಲಕರ ಋತುಗಳಲ್ಲಿ ಮೇಲಿನ ಇಳಿಜಾರುಗಳಲ್ಲಿ ವಾಸಿಸುತ್ತವೆ ಮತ್ತು ಚಳಿಗಾಲದ ತಿಂಗಳುಗಳಲ್ಲಿ ಕಡಿಮೆ ಎತ್ತರದ ಪ್ರದೇಶಗಳಿಗೆ ಚಲಿಸುತ್ತವೆ.



ಸಾಮಾನ್ಯ ಹೆಸರು – ಗೋಲ್ಡನ್ ಫೆಸೆಂಟ್
Scientific Name – Chrysolophus pictus
ಆವಾಸಸ್ಥಾನ – ಪರ್ವತ ಪ್ರದೇಶಗಳಲ್ಲಿನ ದಟ್ಟವಾದ ಕೊನಿಫೆರಸ್ ಕಾಡುಗಳು ಮತ್ತು ದಟ್ಟವಾದ
ಪೊದೆಗಳ ಮಿಶ್ರ ಕಾಡುಗಳು.
ನೈಸರ್ಗಿಕ ಆಹಾರ – ದಾನ್ಯಗಳು, ಹಣ್ಣುಗಳು, ಹುಳುಗಳು, ಕಾಳುಗಳು, ವಿವಿಧ ರೀತಿಯ ಸಸ್ಯವರ್ಗ,
ಎಲೆಗಳು ಮತ್ತು ಅಕಶೇರುಕಗಳು
ಮೃಗಾಲಯದ ಆಹಾರ - ಮಿಶ್ರ ದಾನ್ಯಗಳು, ಗೋಧಿ, ಜೋಳ, ಬಾಜ್ರ, ಕೊತ್ತಂಬರಿ ಸೊಪ್ಪು,
ಸೋಯಾ ಬೀನ್, ರಾಗಿ, ಕೋಳಿ ಆಹಾರ ಮತ್ತು ಮೆಕ್ಕೆ ಜೋಳ.
ನಿಮಗೆ ಗೊತ್ತಾ - ಗೋಲ್ಡನ್ ಫೆಸೆಂಟ್ ನ ರೋಮಾಂಚಕ ಬಣ್ಣವು ದೀರ್ಘಕಾಲದವರೆಗೆ ಸೂರ್ಯನಿಗೆ
ಒಡ್ಡಿದರೆ ಬಣ್ಣ ಮಾಸುವುದರಿಂದ, ಇದನ್ನು ತಪ್ಪಿಸಲು ಇವು ನೆರಳಿನ ಕಾಡುಗಳಲ್ಲಿ ವಾಸಿಸುತ್ತವೆ



ಸಾಮಾನ್ಯ ಹೆಸರು – ಕೆಂಪು ಕಾಡು ಕೋಳಿ
Scientific Name – Gallus gallus
ಆವಾಸಸ್ಥಾನ – ದಟ್ಟ ತೆರೆದ ಅರಣ್ಯ ಪ್ರದೇಶಗಳು ಮತ್ತು ಅಂಚುಗಳಲ್ಲಿ ವಾಸಿಸುತ್ತವೆ
ನೈಸರ್ಗಿಕ ಆಹಾರ – ಬೀಜಗಳು, ಹಣ್ಣುಗಳು, ಗೆದ್ದಲು ಹುಳುಗಳು ಮತ್ತು ಸಣ್ಣ ಕೀಟಗಳು
ಮೃಗಾಲಯದ ಆಹಾರ - ಮಿಶ್ರ ದಾನ್ಯಗಳು, ಗೋಧಿ, ಜೋಳ, ಬಾಜ್ರ, ಕೊತ್ತಂಬರಿ ಸೊಪ್ಪು,
ಸೋಯಾ ಬೀನ್, ರಾಗಿ, ಕೋಳಿ ಆಹಾರ ಮತ್ತು ಹಸಿರು ಎಲೆಗಳು.
ನಿಮಗೆ ಗೊತ್ತಾ - ಕೆಂಪು ಕಾಡು ಕೋಳಿಗಳು ತಮ್ಮ ಗರಿಗಳನ್ನು ಸುಸ್ಥಿತಿಯಲ್ಲಿಡಲು ಧೂಳಿನಲ್ಲಿ ಸ್ನಾನ
ಮಾಡುತ್ತವೆ, ಇದು ಗರಿಗಳ ಮೇಲಿನ ಎಣ್ಣೆಯ ಪ್ರಮಾಣವನ್ನು ನಿಯಂತ್ರಿಸುತ್ತವೆ.



ಸಾಮಾನ್ಯ ಹೆಸರು – ಬೂದು ಕಾಡು ಕೋಳಿ
Scientific Name – Gallus sonneratii
ಆವಾಸಸ್ಥಾನ – ಕಾಡಿನ ನೆಲದ ಮೇಲೆ ಮತ್ತು ತೆರೆದ ಕುರುಚಲು ಅರಣ್ಯ
ನೈಸರ್ಗಿಕ ಆಹಾರ – ಬೀಜಗಳು, ಹಣ್ಣುಗಳು, ಕಾಳುಗಳು, ಗೆದ್ದಲು ಹುಳುಗಳು
ಮತ್ತು ಸಣ್ಣ ಕೀಟಗಳು
ಮೃಗಾಲಯದ ಆಹಾರ - ಮಿಶ್ರ ದಾನ್ಯಗಳು, ಗೋಧಿ, ಜೋಳ, ಬಾಜ್ರ, ಕೊತ್ತಂಬರಿ ಸೊಪ್ಪು,
ಸೋಯಾ ಬೀನ್, ರಾಗಿ, ಕೋಳಿ ಆಹಾರ ಮತ್ತು ಹಸಿರು ಎಲೆಗಳು
ನಿಮಗೆ ಗೊತ್ತಾ : ಗಂಡು ಬೂದು ಕಾಡು ಕೋಳಿಗಳು ಸಾಮಾನ್ಯವಾಗಿ ಕಾಲುಗಳ ಮೇಲೆ ಉದ್ದವಾದ
ಮತ್ತು ಮೊನಚಾದ ಉಗುರನ್ನು ಹೊಂದಿದ್ದು, ಇದು ಅವುಗಳಿಗೆ ಹೋರಾಟದ ಸಮಯದಲ್ಲಿ ಸಾಹಯ ಮಾಡುತ್ತದೆ.



