"ಆಜಾದಿ ಕಾ ಅಮೃತ್ ಮಹೋತ್ಸವದ" ಸಂದರ್ಭದಲ್ಲಿ, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ, ಕೋವಿಡ್ ಸಮಯದಲ್ಲಿ ಮೂಲಸ್ಥಾನದ ಹೊರಗಿನ ವನ್ಯಜೀವಿಗಳ ಸಂರಕ್ಷಣೆಗಾಗಿ ಕೆಲಸ ಮಾಡಿದ ಹದಿಮೂರು ಸಿಬ್ಬಂದಿಗಳಿಗೆ ಬಹುಮಾನಗಳನ್ನು ನೀಡಲಾಯಿತು.
ಉದ್ಯಾನವನದ ನೈರ್ಮಲ್ಯದಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿಗಳು, ಕೋವಿಡ್‌ನಿಂದ ಚೇತರಿಸಿಕೊಂಡವರು, ವನ್ಯಪ್ರಾಣಿಗಳ ರಕ್ಷಣಾ ಕಾರ್ಯಾಚರಣೆಗಳು ಮತ್ತು ಪ್ರಾಣಿಗಳ ನಿರ್ವಹಣೆಯಲ್ಲಿ ತೊಡಗಿರುವ ಸಿಬ್ಬಂದಿಗಳಿಗೆ ಪುರಸ್ಕರಿಸಲಾಯಿತು.
ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿದ ಏಳು ಸಿಬ್ಬಂದಿಗಳ ಪ್ರತಿಭಾನ್ವಿತ ಮಕ್ಕಳಿಗೆ ಶ್ರೀ ಆರ್. ಎಂ. ಎನ್. ಸಹಾಯ್ (ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು) ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಸಿಂಹಗಳ ಬಗ್ಗೆ ಅರಿವು ಮೂಡಿಸಲು, ಅವುಗಳ ಬಗ್ಗೆ ಆಸಕ್ತಿದಾಯಕ ಸಂಗತಿಗಳು ಮತ್ತು ಸಿಂಹಗಳನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಇಂದು "ವಿಶ್ವ ಸಿಂಹ ದಿನಾಚರಣೆ"ಯನ್ನು ಆಚರಿಸಲಾಯಿತು.
ಮೃಗಾಲಯಕ್ಕೆ ಶ್ರಮದಾನ (ಮೃಗಾಲಯದಲ್ಲಿ ಸೇವೆಗಳ ಕೊಡುಗೆ) ಮೂಲಕ ಸಿಂಹಗಳ ಪುಷ್ಟೀಕರಣದ ಸಲುವಾಗಿ ವನ್ಯಜೀವಿ ಉತ್ಸಾಹಿಗಳು ಮೇವು ಕೊಯ್ಲು ಮಾಡುವ ಮೂಲಕ ತಮ್ಮ ಸೇವೆಯನ್ನು ಕೊಡುಗೆಯಾಗಿ ಪ್ರಾಣಿಪಾಲಕರಿಗೆ ಹಸ್ತಾಂತರಿಸಿದರು.