ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಏಪ್ರಿಲ್ 14 ರಿಂದ 19 ಮತ್ತು ಮೇ 5 ರಿಂದ 10 ರವರೆಗೆ, 6 ದಿನಗಳ ಎರಡು ಬ್ಯಾಚ್‌ಗಳಲ್ಲಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದೆ. 11 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳು ಆನ್‌ಲೈನ್ (https://forms.gle/ayjy7vebJoUBJGUF8) ಅರ್ಜಿಯ ಮೂಲಕ ಶಿಬಿರಕ್ಕೆ ನೋಂದಾಯಿಸಿಕೊಳ್ಳಬಹುದು. ಗರಿಷ್ಠ 50 ವಿದ್ಯಾರ್ಥಿಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಶಿಬಿರವು ವಿವಿಧ ಚಟುವಟಿಕೆಗಳನ್ನು ಒಳಗೊಂಡಿದ್ದು ವಿದ್ಯಾರ್ಥಿಗಳಿಗೆ ಮೃಗಾಲಯ, ಚಿಟ್ಟೆ ಉದ್ಯಾನ, ಸಫಾರಿ ವೀಕ್ಷಣೆ ಮತ್ತು ಪ್ರಕೃತಿ ಮತ್ತು ವನ್ಯಜೀವಿಗಳ ನಿರ್ವಹಣೆಯ ಒಳನೋಟವನ್ನು ಪಡೆಯಲು ಮತ್ತು ಅವರು ಕೊಡುಗೆ ನೀಡಬಹುದಾದ ಸ್ಥಳ ಮತ್ತು ವನ್ಯಜೀವಿಗಳ ನಿರ್ವಹಣೆಗೆ ಸಂಭಂದಿಸಿದಂತೆ ವಿವಧ ಚಟುವಟಿಕೆಗಳು ಒಳಗೊಂಡಿದೆ.
ಶಿಭಿರಾರ್ಥಿಗಳು, ಈ ಕ್ಷೇತ್ರದಲ್ಲಿನ ವಿಭಿನ್ನ ವೃತ್ತಿಗಳು ಮತ್ತು ಸಂರಕ್ಷಣೆಯಲ್ಲಿ ಅವರ ಪಾತ್ರದ ಬಗ್ಗೆ ಒಳನೋಟವನ್ನು ಒಳನೋಟವನ್ನು ಪಡೆಯುತ್ತಾರೆ. ನೋಂದಣಿ ಶುಲ್ಕ ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ರೂ.2000/- ಮತ್ತು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ನೋಂದಣಿ ಶುಲ್ಕ ರೂ.1000/- ನೋಂದಣಿ ಶುಲ್ಕವು ಪ್ರವೇಶ ಶುಲ್ಕ ಚಟುವಟಿಕೆಗಳು ಮತ್ತು ಮಧ್ಯಾಹ್ನದ ಊಟವನ್ನು ಒಳಗೊಂಡಿರುತ್ತದೆ.